ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕ್ರೀಡೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿ: ಕೊಪ್ಪದ

Mainashree
Updated On : 26 Aug 2013, 10:48 am

ಹಾನಗಲ್ಲ: ಕ್ರೀಡಾ ಚಟುವಟಿಕೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳ ಕ್ರೀಡಾ ಉತ್ತೇಜನಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳ ಸಾಫಲ್ಯಕ್ಕೆ ಶಿಕ್ಷಕರು ಗಮನ ಹರಿಸಬೇಕು ಎಂದು ಗುಬ್ಬಿ ನಂಜುಂಡೇಶ್ವರ ಗ್ರಾಮೀಣ ಪ್ರೌಢಶಾಲಾ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಕೊಪ್ಪದ ಕರೆ ನೀಡಿದರು.
ತಾಲೂಕಿನ ಉಪ್ಪಣಶಿ-ಸೋಮಸಾಗರ ಗ್ರಾಮ ವ್ಯಾಪ್ತಿಯ ಗುಬ್ಬಿ ನಂಜುಂಡೇಶ್ವರ ಗ್ರಾಮೀಣ ಪ್ರೌಢಶಾಲೆಯಲ್ಲಿ ಮಂಗಳವಾರ ಆಡೂರ ಗ್ರೂಪ್ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸದೃಢ ಆರೋಗ್ಯವಿದ್ದರೆ ಉತ್ತಮ ಶಿಕ್ಷಣ ಸಾಧ್ಯವಿದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ವಿದ್ಯಾರ್ಥಿಗಳ ಮನಸ್ಥಿತಿ ಆರೋಗ್ಯಪೂರ್ಣವಾಗಿ ವಿಕಾಸ ಹೊಂದುತ್ತದೆ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ನಿವೃತ್ತ ಶಿಕ್ಷಕ ಎಸ್.ಎಸ್. ಹೆರೂರ, ಶಾರೀರಿಕ ಸಂಪತ್ತನ್ನು ಹೆಚ್ಚಿಸಲು ಕ್ರೀಡೆ ಅತ್ಯಗತ್ಯ. ಆರೋಗ್ಯ ಭಾಗ್ಯದ ಕಾಳಜಿ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಯಬೇಕು. ಸರ್ಕಾರದ ಸೌಲಭ್ಯ ಪಡೆದುಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸಣ್ಣ ಹೆರೂರ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖಪ್ಪ ಕಿಚಡಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ.ಪಾಟೀಲ, ಮುಖ್ಯ ಶಿಕ್ಷಕ ಜೆ.ವಿ. ಬಣಕಾರ, ಬಸವರಾಜ ತಳವಾರ, ವೈ.ಎನ್. ಪಾಟೀಲ, ಎನ್.ಕೆ. ನದಾಫ್ ಇದ್ದರು.
ತಾಲೂಕಿನ ಆಡೂರ, ಕಂಚಿನೆಗಳೂರ, ಬಾಳಂಬೀಡ, ಹೆರೂರ, ಹಿರೆಹುಲ್ಲಾಳ, ಉಪ್ಪಣಶಿ ಮತ್ತು ಸೋಮಸಾಗರ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement