ಕೈ ತುತ್ತು ನೀಡಿ ರಕ್ಷಾ ಬಂಧನ ಆಚರಣೆ
ಶಿಗ್ಗಾಂವಿ: ಜೈನ ಸಮುದಾಯದ ಒಂದು ಸಾವಿರದ ಎಂಟು ಮಕ್ಕಳು ತಮ್ಮ ಸಮಾಜದ ಮುನಿಗಳಾದ ಪುಣ್ಯಸಾಗರ್ ಮಹಾರಾಜ್ ಹಾಗೂ ಪ್ರಸಂಗ ಸಾಗರ್ ಮಹರಾಜ್ ಅವರಿಗೆ ಕೈ ತುತ್ತು ಹಾಕುವ ಮೂಲಕ ರಕ್ಷಾ ಬಂಧನ ಪರ್ವ ಕಾರ್ಯಕ್ರಮವು ವಿಧಿ- ವಿಧಾನಗಳೊಂದಿಗೆ ತಾಲೂಕಿನ ಅರಟಾಳ ಗ್ರಾಮದಲ್ಲಿ ಜರುಗಿತು.
ಅರಟಾಳ ಗ್ರಾಮವು ಐತಿಹಾಸಿಕ 16ನೇ ಶತಮಾನಕ್ಕೆ ಸೇರಿದ ಪಾರ್ಶ್ವನಾಥ ದೇವಸ್ಥಾನ ಈ ರಕ್ಷಾ ಬಂಧನ ಪರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸಾವಿರಕ್ಕೂ ಅಧಿಕ ಸಂಖೆಯಲ್ಲಿ ಸೇರಿದ ಮಕ್ಕಳು ಶಾಂತಯುತವಾಗಿ ಮುನಿಗಳಿಗೆ ಕೈತುತ್ತು ಹಾಕುತ್ತಿದ್ದಂದೆ ಶಾಂತಚಿತ್ತರಾಗಿ ಕೈತುತ್ತನ್ನು ತಿಂದು ಧನ್ಯತಾಭಾವ ಮೆರೆದರು.
ಜೈನ ಪದ್ಧತಿಯ ಪ್ರಕಾರ ಮಕ್ಕಳು ನೀಡಿದ ಈ ಕೈತುತ್ತು 700ಕ್ಕೂ ಅಧಿಕ ಜೈನ್ ಮುನಿಗಳನ್ನು ಇಲ್ಲಿ ಇದ್ದವರನ್ನು ರಕ್ಷಣೆ ಮಾಡುವ ಮೂಲಕ ರಕ್ಷಾ ಬಂಧನ ಆಚರಿಸುವುದಾಗಿ ಹಾಗೂ ಅವರ ಮನಸ್ಸಿಗೆ ತಲುಪಿ ಸಂತೋಷವಾಗುತ್ತದೆ ಎಂದು ಪುಣ್ಯಸಾಗರ್ ಮಹಾರಾಜರು ತಿಳಿಸಿದರು.
ಕೈತುತ್ತು ನೀಡುವ ಈ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದೆ. ಇಂತಹ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಬಾರಿ ಮಾಡಲಾಗಿದೆ ಎಂದು ಪುಣ್ಯಸಾಗರ್ ಮಹಾರಾಜ್ ತಿಳಿಸಿದರು.
ಜೈನ ಸಮುದಾಯದ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ, ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅರಟಾಳ ಜೈನ್ ಸಮಾಜದ ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.