ರಾಣಿಬೆನ್ನೂರು: ಪಾಲಕರ ದಿನ, ಸ್ವಾತಂತ್ರ್ಯೋತ್ಸವ
ರಾಣಿಬೆನ್ನೂರು: ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಹಾವೇರಿ, ಅರುಣೋದಯ ಶಿಕ್ಷಣ ಮತ್ತು ಆರೋಗ್ಯ ಮತ್ತು ಕೃಷಿ ಅಭಿವೃದ್ಧಿ, ಕಿನ ಕೊಡಿಯಾಲ ಹೊಸಪೇಟೆಯಲ್ಲಿರುವ ಪಾರಿಜಾತ ಬಾಲ ಕಾರ್ಮಿಕರ ವಿಶೇಷ ವಸತಿ ಶಾಲೆಯಲ್ಲಿ ಪಾಲಕರ ಮತ್ತು ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ ಎಂ.ಎಂ.ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಗುತ್ತೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಂದ್ರಕಲಾ ಹೆಗ್ಗಪ್ಪನವರ, ಅರುಣೋದಯ ಸಂಸ್ಥೆಯ ಸಂಸ್ಥಾಪಕಿ ಹಾಗೂ ಕಾರ್ಯದರ್ಶಿ ಹೊನ್ನಮ್ಮ ಚಂದಾಪುರ ಮಾತನಾಡಿದರು.