ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾನೂನಿಗೆ ಅಗೌರವ ತೋರಿದರೆ ಶಿಕ್ಷೆ

Mainashree
Updated On : 28 Aug 2013, 11:42 am

ಹಾನಗಲ್ಲ: ರಾಷ್ಟ್ರಧ್ವಜ ಹಾಗೂ ಕಾನೂನಿಗೆ ಅಗೌರವ ತೋರಿದರೆ ಯಾರೇ ಆಗಿರಲಿ ಶಿಕ್ಷೆಗೊಳಪಡಬೇಕಾಗುತ್ತದೆ ಎಂದು ಹಾನಗಲ್ಲಿನ ಸಿವಿಲ್ ವಿಭಾಗದ ಹಿರಿಯ ನ್ಯಾಯಾಧೀಶ ಎಂ. ರಾಮಚಂದ್ರ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಂಗಳವಾರ ಹಾನಗಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ನ್ಯಾಯವಾದಿಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಜ್ಞಾನವಿಲ್ಲದೆ ಆಪತ್ತಿಗೆ ಸಿಲುಕಿ ಸಮಸ್ಯೆ ಎದುರಿಸುವುದಕ್ಕಿಂತ ಕಾನೂನುಗಳನ್ನ್ನು ತಿಳಿದು ಬದುಕುವುದು ಉಚಿತ. ಇಡೀ ಸಮುದಾಯದ ಹಿತಕ್ಕಾಗಿಯೇ ಜನಪ್ರತಿನಿಧಿಗಳು ಕಾನೂನನ್ನ್ನು ರೂಪಿಸಿರುತ್ತಾರೆ. ನಮ್ಮ ದೇಶ, ಭಾಷೆ, ರಾಷ್ಟ್ರಧ್ವಜ ಹಾಗೂ ಕಾನೂನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
'ರ್ಯಾಗಿಂಗ್ ಕಾಯ್ದೆ ಹಾಗೂ ಅದರ ಜಾರಿ' ವಿಷಯದ ಕುರಿತು ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಕೆ.ಬಿ. ದೊಡ್ಡಮನಿ, ಕಾನೂನು ಪಾಲನೆ ಶಿಸ್ತಿಗೆ ದಾರಿಯಾಗುತ್ತದೆ. ಅಶಿಸ್ತು ಅಥವಾ ಶೋಷಣೆಗೆ ಕಾರಣರಾದರೆ ಅದು ಅಪರಾಧ ಎಂಬುದನ್ನ್ನು ಅರಿಯಬೇಕು. ರ್ಯಾಗಿಂಗ್‌ನಂತಹ ಅಸಹನೀಯ ಘಟನೆಗಳು ಆ ವ್ಯಕ್ತಿಗಳ ಬದುಕನ್ನೇ ಸರ್ವನಾಶ ಮಾಡಿದ ಹಾಗೂ ಆತ್ಮಹತ್ಯೆಯಂತಹ ಮಾನಸಿಕ ಸ್ಥಿತಿಗೆ ಕೊಂಡೊಯ್ಯುತ್ತವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಸೌಹಾರ್ದ ಹಾಗೂ ಸಹಬಾಳ್ವೆ ನಮ್ಮ ಜೀವನದ ಉಸಿರಾಗಬೇಕು. ಆಗ ಅಪಮಾನ ನಿಂದೆಗಳಿಲ್ಲದ ಸಮಾಜ ಕಟ್ಟಲು ಸಾಧ್ಯ. ಅಪರಾಧಗಳನ್ನ್ನು ಸ್ವಯಂ ನಿಗ್ರಹ ಮಾಡಿಕೊಂಡರೆ ಈ ನಾಡು ಸೌಖ್ಯದ ಸುರಕ್ಷಿತ ನಾಡಾಗುತ್ತದೆ ಎಂದರು.
ಮೋಟಾರು ವಾಹನ ಕಾಯ್ದೆ ಹಾಗೂ ಶಿಕ್ಷಣದ ಹಕ್ಕುಗಳ ಕುರಿತು ಮಾತನಾಡಿದ ನ್ಯಾಯವಾದಿ ರವಿಬಾಬು ಪೂಜಾರ, ವಿದ್ಯಾ ಪಡೀರಿ, ಬುದ್ಧಿ ಕಳಕೋಬ್ಯಾಡ್ರಿ, ಅಜ್ಞಾನ, ಅವಸರ ಬದುಕನ್ನ್ನು ಹಾಳು ಮಾಡುತ್ತದೆ. ವಾಹನ ಓಡಿಸಲು ಕಾನೂನುಗಳಿವೆ. ಅವನ್ನ್ನು ಅರಿಯಲೇಬೇಕು. ನಿಮ್ಮ ಹವ್ಯಾಸಗಳು ಸಾರ್ವಜನಿಕರಿಗೆ ಅಡ್ಡಿ, ಆಘಾತವನ್ನ್ನುಂಟು ಮಾಡಬಾರದು. ಜೀವ ವಿಮೆಯಂತೆ ವಾಹನಗಳ ವಿಮ್ನೆ ಕಡ್ಡಾಯವಾಗಿ ಮಾಡಿಸಲೇಬೇಕು. ನಿಮ್ಮ ವಾಹನ ಕಾನೂನುಬದ್ಧ ನೋಂದಣಿಯಾಗಿರಲಿ, ನೀವು ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಿಸಿ ಅನಾಹುತಕ್ಕೆ ಸಿಲುಕಬೇಡಿ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶ (ಕಿರಿಯ ವಿಭಾಗ) ಮದ್ವೇಶ ಡಬೇರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿ ಒಡೆಯರ, ಕಾರ್ಯದರ್ಶಿ ಆರ್.ಪಿ.ಅಕ್ಕಿವಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸೂರ್ಯನಾರಾಯಣ, ಗೋಪಿಕಾ ಟಿ.ಎಸ್., ನ್ಯಾಯವಾದಿ ಎಸ್.ಎಸ್. ಕೋತಂಬರಿ ಪಾಲ್ಗೊಂಡಿದ್ದರು. ಉಪನ್ಯಾಸಕ ಮಾರುತಿ ಶಿಡ್ಲಾಪುರ ಸ್ವಾಗತಿಸಿದರು. ಉಪನ್ಯಾಸಕ ಎಸ್.ಬಿ. ಕಮಾಟಿ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಮಹೇಂದ್ರ ಬಾರಿಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement