ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೆ.16ಕ್ಕೆ ವಿವೇಕಾನಂದರ ರಥಯಾತ್ರೆ ಹಿರೇಕೆರೂರಿಗೆ: ಮಹಾರಾಜರು

Mainashree
Updated On : 28 Aug 2013, 11:42 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಆ. 27
ವೀರಯೋಗಿ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಅಂಗವಾಗಿ ವಿವೇಕಾನಂದರ ರಥಯಾತ್ರೆ ಸೆ. 16ರಂದು ಹಿರೇಕೆರೂರು ಪಟ್ಟಣಕ್ಕೆ ಆಗಮಿಸಲಿದೆ ಎಂದು ರಾಣಿಬೆನ್ನೂರಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶನಂದಜೀ ಮಹಾರಾಜರು       ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿವೇಕಾನಂದರ ವಿಚಾರಧಾರೆಗಳನ್ನು ಯುವಕರಿಗೆ ಹಾಗೂ ಸಾಮಾನ್ಯರಿಗೆ ತಿಳಿಪಡಿಸುವುದರ ಜೊತೆಯಲ್ಲಿ ಯುವ ಜನತೆಯಲ್ಲಿ ದೇಶಾಭಿಮಾನ ಜಾಗ್ರತಗೊಳಿಸುವ ಉದ್ದೇಶದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವೇಕಾನಂದರ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ರಥಯಾತ್ರೆ ಸಂಚಾರ ನಡೆಸಿದೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ದೇಶವನ್ನು ಜಗತ್ತಿಗೆ ಪರಿಚಯಿಸಿದ ಹಾಗೂ ಯುವ ಜನತೆಗ ಸ್ಫೂರ್ತಿಯ ಚಿಲುಮೆಯಾಗಿರುವ ಸ್ವಾಮಿ ವಿವೇಕಾನಂದರು ಭಾರತ ದೇಶದ ಹೆಮ್ಮೆಯ ಪುತ್ರ ಅವರ ಆದರ್ಶಗಳು ಇಂದಿನ ಯುವ ಜನತೆಗೆ ದಾರಿದೀಪವಾಗಿವೆ. ಅವರ ರಥಯಾತ್ರೆಗೆ ತಾಲೂಕಿನಲ್ಲಿ ಭವ್ಯ ಸ್ವಾಗತ ನೀಡಲು ಎಲ್ಲರೂ ಪಾಲ್ಗೊಳ್ಳೋಣ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್. ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಕರ್ನಾಟಕ ಜನತಾ ಪಕ್ಷದ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ, ಎಲ್.ಎಂ. ಪೂಜಾರ, ಪ್ರಾಚಾರ್ಯ ಎಸ್.ಬಿ. ಚನ್ನಗೌಡ್ರ, ಉಪನ್ಯಾಸಕ ಎಂ.ಎಸ್. ರುದ್ರಗೌಡ, ಸಿ.ಎಸ್. ತಿಪ್ಪಶೆಟ್ಟಿ, ದತ್ತಾತ್ರೇಯ ರಾಯ್ಕರ್, ಅರುಣ ಹಮ್ಮಿಗಿ, ಪ್ರಭು ಮಳವಳ್ಳಿ, ರಾಮು    ಚಿಗಮೂರದ, ದೇವರಾಜ ಹಂಚಿನಮನಿ,     ವೀರನಗೌಡ ಬಿದರಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement