ಜ್ಞಾನ ವಿಕಾಸಕ್ಕೆ ಕ್ರೀಡೆ ಅತ್ಯಗತ್ಯ: ಮೂಲಿಮನಿ
ಶಿಗ್ಗಾಂವಿ: ಮಕ್ಕಳ ಜ್ಞಾನ ವಿಕಾಸಕ್ಕಾಗಿ ಪ್ರತಿಯೊಬ್ಬರಲ್ಲಿ ಕ್ರೀಡಾ ಮನೋಭಾವನೆಗಳು ಬೆಳೆಯಬೇಕು. ಅದರಿಂದ ಕಲಿತ ಅಕ್ಷರ ಶಾಶ್ವತವಾಗಿ ನೆನಪಿರಲು ಸಾಧ್ಯ ಎಂದು ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ನಡೆದ ಬಂಕಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಪಟ್ಟಣಶೆಟ್ಟರ್, ಕೆಂಡದಮಠದ ಬಸಯ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮೋಹನ ಮಂಗಳಾರತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಚನ್ನಬಸಪ್ಪ ಹಳವಳ್ಳಿ, ಸಂಗಪ್ಪ ಹರವಿ, ಇಸ್ಮಾಯಿಲ್ ದೊಡ್ಡಮನಿ, ಮ್ಲಲೇಶಪ್ಪ ಬಡ್ಡಿ, ಸುರೇಶಗೌಡ ಪಾಟೀಲ, ಶಿವಾನಂದ ಈರಪ್ಪನವರ, ರಾಜು ಹುಲಮನಿ, ಯಲ್ಲಪ್ಪ ವಳಗೇರಿ, ವೀರಭದ್ರಪ್ಪ ಸವಣೂರ, ತಾಲೂಕು ಸಿಆರ್ಪಿ ಅಧಿಕಾರಿಗಳಾದ ರಮೇಶ ಬಾರ್ಕಿ, ಎಸ್.ಆರ್. ತುಪ್ಪದ, ಸಿ.ಎನ್. ಕಲಕೋಟಿ, ಸರಸ್ವತಿ ನರಗುಂದ, ಪಿ.ಎಂ. ಹದಣ್ಣವರ, ಎಸ್.ಎನ್. ಭಜಂತ್ರಿ ಇತರರಿದ್ದರು.