ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 29 Aug 2013, 10:49 am

31ರಂದು ಓಲಂಪಿಯಡ್ ಪರೀಕ್ಷೆ
ಹಾವೇರಿ: ಶಾಲಾ ಹಂತದ ಓಲಂಪಿಯಡ್ (ಸ್ಪರ್ಧೆ ಹೆಸರು) ಪರೀಕ್ಷೆಗಳು 6 ಮತ್ತು 9ನೇ ತರಗತಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆ. 31ರಂದು ಬೆಳಗ್ಗೆ 10ರಿಂದ 11ರ ವರೆಗೆ ವಿಜ್ಞಾನ ಪರೀಕ್ಷೆ, ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಗಣಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಜಿಲ್ಲಾ ಡಯಟ್ ಉಪನಿರ್ದೇಶಕ ಎಂ.ಡಿ. ಬಳ್ಳಾರಿ ತಿಳಿಸಿದ್ದಾರೆ. ಜಿಲ್ಲೆಯ 596 ಪ್ರಾಥಮಿಕ ಶಾಲೆಯ 17,548 ಕನ್ನಡ ಮಾಧ್ಯಮ ಮಕ್ಕಳು, 107 ಶಾಲೆಯ 3,133 ಉರ್ದು ಮಾಧ್ಯಮ ಮಕ್ಕಳು, 116 ಪ್ರೌಢಶಾಲೆಗಳಿಂದ 8,479 ಕನ್ನಡ ಮಾಧ್ಯಮದ ಮಕ್ಕಳು, 24 ಉರ್ದು ಪ್ರೌಢಶಾಲೆಗಳಿಂದ 1916 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಶಾಲಾ ಹಂತದಲ್ಲಿ ಉತ್ತೀರ್ಣರಾದ ಶೇ. 5ರಷ್ಟು ಮಕ್ಕಳು ತಾಲೂಕು ಹಂತದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ. ಈ ಕುರಿತು ಪ್ರಶ್ನೆ ಪತ್ರಿಕೆ ತಯಾರಿ ಪರೀಕ್ಷೆ ನಡೆಸುವ ವಿಧಾನ ನೋಡಲ್ ಅಧಿಕಾರಿಗಳ ನೇಮಕ ಮೌಲ್ಯಮಾಪನ ಕುರಿತಾದ ತರಬೇತಿಯನ್ನು ಎಲ್ಲ ಬಿಇಒ ಮತ್ತು ಬಿಆರ್‌ಸಿಗಳಿಗೆ ಆ. 7ರಂದು ನೀಡಿದೆ.  ಹೆಚ್ಚಿನ ಮಾಹಿತಿಗಾಗಿ ಆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಡಯಟ್ ಉಪನಿರ್ದೇಶಕ ಎಂ.ಡಿ. ಬಳ್ಳಾರಿ ಅವರು ತಿಳಿಸಿದ್ದಾರೆ.

ಬೆಳೆಗೆ ರೋಗ: ರೈತರಿಗೆ ಸಲಹೆಗಳು
ಹಾವೇರಿ: ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಹಾವೇರಿ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಬೆಳೆ ಪರಿಸ್ಥಿತಿ ಪರಿಶೀಲನೆ ನಡೆಸಿದಾಗ ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೈಬ್ರಿಡ್ ಹತ್ತಿ (ಸಂಕರಣ ಹತ್ತಿ) ಬೆಳೆಯಲ್ಲಿ ರಸಹೀರುವ ಕೀಟಗಳಾದ ಥ್ರಿಪ್ಸ್, ಮೈಟ್ ನುಸಿ, ಜಿಗಿಹುಳು, ಸಸ್ಯಹೇನು, ಬಿಳಿನೋಣಗಳು ಗಿಡಗಳ ಎಲೆಯಲ್ಲಿ ರಸಹೀರುವುದರಿಂದ ಹತ್ತಿ ಬೆಳೆಯ ಎಲೆಗಳು ಮುಟುರು ಆಗುತ್ತಿರುವುದು ಕಂಡುಬಂದಿದೆ. ಇದರ ಹತೋಟಿಗೆ ರೈತರು ಈಗಾಗಲೇ ಇಮಿಡಾಕ್ಲೋಪಿಡ್ ಸಿಂಪರಣೆ ಮಾಡಿದ್ದು, 2ನೇ ಸಿಂಪರಣೆಯಾಗಿ ಅಸಿಟಾಮಿಪ್ರಿಡ್ 20 ಎಸ್.ಪಿ. 5 ಗ್ರಾಂ ಪ್ರತಿ ಕ್ಯಾನಿಗೆ (16ಲೀ ನೀರಿಗೆ) ಜೊತೆಗೆ ಡೈಕೊಫಾಲ್ 40 ಮಿಲಿ ಪ್ರತಿ ಕ್ಯಾನಿಗೆ (16ಲೀ. ನೀರಿಗೆ) ಬೆರೆಸಿ ಸಿಂಪರಣೆ ಮಾಡಿ, ಇದಲ್ಲದೆ ಮಿರಿಡ್ ತಿಗಣಿ ಹಾವಳಿ ಹೆಚ್ಚಾಗುತ್ತಿದ್ದು, ಈ ಬಾಧೆಯಿಂದ ಮೊಗ್ಗುಗಳಲ್ಲಿ ಕಪ್ಪುಚುಕ್ಕೆ ಕಾಣಿಸಿಕೊಂಡು ಗಿಣಿಮೂತಿ ಆಕಾರಕ್ಕೆ ತಿರುಗಿ ಉದುರುತ್ತವೆ. ಇದರ ಹತೋಟಿಗೆ ಅಸಿಫೆಟ್ 1ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಲು ಸೂಚಿಸಿದೆ. ಇದರ ಜೊತೆಗೆ ಹತ್ತಿ ಬೆಳೆಯು 65-70 ದಿನಗಳ ಹಂತದಲ್ಲಿದ್ದು, ಎಲೆಗಳು ಕೆಂಪಾಗುವ ಸಂಭವವಿದ್ದು, ಮ್ಯಾಗ್ನೇಷಿಯಂ ಸಲ್ಪೇಟ್ 10 ಗ್ರಾಂ.ಲೀ ನೀರಿಗೆ ಬೆರೆಸಿ ರೈತರು ಸಾಮೂಹಿಕವಾಗಿ ಸಿಂಪರಣೆ ಮಾಡಲು ಹನುಮನಮಟ್ಟಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ಸಲಹೆ ನೀಡಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement