ಧೂಳು ತಿನ್ನುತ್ತಿರುವ ಅಂಗವಿಕಲರ ತ್ರಿಚಕ್ರ ಸೈಕಲ್‌ಗಳು
ರಾಣಿಬೆನ್ನೂರು: ತಾಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿರುವ 105 ಗ್ರಾಮಗಳಲ್ಲಿನ ಅಂಗವಿಕಲರ ಕಲ್ಯಾಣಕ್ಕಾಗಿ ತಾಲೂಕು ಪಂಚಾಯಿತಿಯಿಂದ ಕಾಯ್ದಿರಿಸಲಾದ 2012-13ನೇ ಸಾಲಿನ ಅಭಿವೃದ್ಧಿ ಅನುದಾನದಲ್ಲಿ ಈಗಾಗಲೆ ಗುರುತಿಸಲ್ಪಟ್ಟಿರುವ ಅಂಗವಿಕಲರಿಗೆ ವಿತರಿಸುವುದಕ್ಕಾಗಿ ತಾಪಂನಿಂದ ಖರೀದಿಸಿರುವ ತ್ರಿಚಕ್ರ ಸೈಕಲ್‌ಗಳು ರಾಜ್ಯದಲ್ಲಿ ನಡೆದ ಲೋಕಸಭಾ ಹಾಗೂ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಗರದ ತಾಪಂನಲ್ಲಿ ಧೂಳು ತಿನ್ನುತ್ತಿವೆ. ತಾಲೂಕು ಪಂಚಾಯಿತಿಯಿಂದ ತಾಲೂಕಿನ ಗ್ರಾಮಾಂತರ ಪ್ರದೇಶದ (ಅಂಗವಿಕಲರಿಗೆ) ವಿಕಲಚೇತನರಿಗೆ ವಿತರಿಸುವುದಕ್ಕಾಗಿ ತಾಪಂ 2012-13ನೇ ಸಾಲಿನಲ್ಲಿ ಕಾಯ್ದಿರಿಸಲಾದ ಸುಮಾರು ರು. 3 ಲಕ್ಷ ಅನುದಾನದಲ್ಲಿ 50 ತ್ರಿಚಕ್ರ ಸೈಕಲ್‌ಗಳನ್ನು ಕಳೆದ 2 ತಿಂಗಳ ಹಿಂದೆಯೇ ಖರೀದಿಸಿದ್ದು, ತಾಲೂಕು ಪಂಚಾಯಿತಿಯಿಂದ ಖರೀದಿಸಿರುವ ಸೈಕಲ್‌ಗಳನ್ನು ವಿತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಅನುಸರಿಸಿದ್ದ ಸಮಯದಲ್ಲಿಯೇ ರಾಜ್ಯದಲ್ಲಿ ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ಘೂಷಣೆಯಾಗಿದ್ದ ಕಾರಣ ಖರೀದಿಸಿರುವ ಸೈಕಲ್‌ಗಳನ್ನು ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದ ಕಟ್ಟಡದಲ್ಲಿ ಇರಿಸಿದ್ದರಿಂದ ಸೈಕಲ್‌ಗಳು ಧೂಳು ತಿನ್ನುತ್ತಿದ್ದು, ತ್ರಿಚಕ್ರ ಸೈಕಲ್‌ಗಾಗಿ ಕಾದು ಕುಳಿತಿರುವ, ಆಯ್ಕೆಯಾಗಿರುವ ಅಂಗವಿಕಲರು ಸೈಕಲ್‌ಗಾಗಿ ನಿತ್ಯ ತಾಪಂಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಸೈಕಲ್ ವಿತರಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.