ನೇರ ಸಂದರ್ಶನಕ್ಕೆ ಆಹ್ವಾನ
ಹಾವೇರಿ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ 1 ಪಿಎಂಡಬ್ಲ್ಯೂ (ಪ್ಯಾರಾ ಮೆಡಿಕಲ್ ವರ್ಕರ್) ಹುದ್ದೆಯನ್ನು ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಮಾರ್ಚ್ 2014ರ ಅಂತ್ಯದವರೆಗೆ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ನೇರ ಸಂದರ್ಶನ ಸೆಪ್ಟೆಂಬರ್ 6ರಂದು ಜರುಗಲಿದೆ. ಅಭ್ಯರ್ಥಿಯು ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. 1 ಆಗಸ್ಟ್, 2013ಕ್ಕೆ 65 ವರ್ಷ ಮೀರಿರಬಾರದು ಹಾಗೂ ಮಾನ್ಯತೆ ಪಡೆದ ತರಬೇತಿ ಕೇಂದ್ರದಲ್ಲಿ ಕುಷ್ಠರೋಗದಲ್ಲಿ 6 ತಿಂಗಳ ಅವಧಿಯ ಪಿಎಂಡಬ್ಲ್ಯೂ ತರಬೇತಿ ಹೊಂದಿರಬೇಕು. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸೇವೆ ಮಾಡಿದ ಬಗ್ಗೆ ಸಂಭಂಧಪಟ್ಟ ಸಂಸ್ಥೆಯ ಮುಖ್ಯಸ್ಥರಿಂದ ಪಡೆದ ಪ್ರಮಾಣ ಪತ್ರ (ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಿಂದ ಮೇಲು ರುಜು ಮಾಡಿದ) ಹೊಂದಿರಬೇಕು. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರು. 10 ಸಾವಿರ ವೇತನ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 6ರಂದು ಬೆಳಗ್ಗೆ 11.30ಕ್ಕೆ ಎಲ್ಲ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಹಾವೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.