ಪರೀಕ್ಷೆ: ಮೌಲ್ಯಮಾಪನ ಕಾರ್ಯಾರಂಭ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 29
ತಾಲೂಕಿನ 35 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆ. 25ರಂದು ತಾಲೂಕು ಲೋಕ ಶಿಕ್ಷಣ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ನವ ಸಾಕ್ಷರರಿಗಾಗಿ ಸಡೆಸಿದ ರಾಷ್ಟ್ರ ಮಟ್ಟದ ಪರೀಕ್ಷೆಗೆಯ ಮೌಲ್ಯಮಾಪನಾ ಕಾರ್ಯ ಪ್ರಾರಂಭಗೊಂಡಿದೆ.
ನಗರದ ತಾಲೂಕು ಪಂಚಾಯಿತಿಯಲ್ಲಿರುವ ತಾಲೂಕು ಲೋಕ ಶಿಕ್ಷಣ ಸಮಿತಿ ಕಾರ್ಯಾಲಯದಲ್ಲಿ ಮೌಲ್ಯಮಾಪನಾ ಕಾರ್ಯಕ್ಕೆ ಚಾಲನೆ ನೀಡಿದ ತಾಲೂಕು ಸಂಯೋಜಕ ಆರ್.ಡಿ. ಹೊಂಬರಡಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ 35 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರಾರ್ಥಮಿಕ ಶಾಲೆಗಳಲ್ಲಿ ಆ. 25ರಂದು ನಡೆಸಿದ್ದ ಸವಸಾಕ್ಷರರ ಪರೀಕ್ಷೆ ಬರೆಯಲು ಲೋಕ ಶಿಕ್ಷಣ ಸಮಿತಿಯಿಂದ ಅನುಮತಿ ಪಡೆದಿದ್ದ 1,160 ಕಲಿಕಾರ್ಥಿಗಳಲ್ಲಿ 1,122 ಜನ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ನವ ಸಾಕ್ಷರರೆಂದು ಪರೀಕ್ಷೆ ಬರೆಯಲು ಅನುಮತಿ ಪಡೆದಿದ್ದವರಲ್ಲಿ 953 ಮಹಿಳೆ, 169 ಪುರುಷರು ಸೇರಿದಂತೆ ಒಟ್ಟು 1,122 ಕಲಿಕಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಮೌಲ್ಯ ಮಾಪನ: ಆ. 25ರಂದು ನವ ಸಾಕ್ಷರರು ಬರೆದ ಪರೀಕ್ಷೆಯ ಮೌಲ್ಯಮಾಪನಾ ಕಾರ್ಯ ಗುರುವಾರ ಮತ್ತು ಶುಕ್ರವಾರ ನಡೆಸಲು ಸಕಲ ಸಿದ್ಧತೆ ಮಾಡಲಾಗಿದ್ದು, ಓದಿಗೆ 50 ಅಂಕ, ಬರಹಕ್ಕೆ 50 ಅಂಕ, ಲೆಕ್ಕಾಚಾರಕ್ಕೆ 50 ಅಂಕಗಳನ್ನು ನೀಡಲಾಗುವುದು. ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದರೆ ಎ ದರ್ಜೆ ಎಂದು ಶೇ. 40ರಿಂದ 60 ಅಂಕ ಪಡೆದರೆ ಬಿ ದರ್ಜೆ ಎಂದು ಶೇ. 40ಕ್ಕಿಂತ ಕಡಿಮೆ ಅಂಕ ಪಡೆದರೆ ಸಿ ದರ್ಜೆ ಎಂದು ಪರಿಗಣಿಸಿ ಫಲಿತಾಂಶ ಪ್ರಕಟಿಸಿ ರಾಷ್ಟ್ರೀಯ ಮುಕ್ತ ಶಾಲಾ ಮತ್ತು ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರಿಗಳಿಂದ ಜಂಟಿಯಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ.
ಇಂದಿನಿಂದ ಪ್ರಾರಂಭಗೊಂಡಿರುವ ಮೌಲ್ಯಮಾಪನಾ ಕಾರ್ಯಕ್ಕೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಶಿಕ್ಷಕರಾದ ಎಸ್.ಸಿ. ಬಡಿಗೇರ, ಪಿ.ಎನ್. ಹುಲ್ಲತ್ತಿ, ಎಚ್.ಎಂ. ಗೌಡರ, ಎಸ್.ಜಿ. ಇಚ್ಚಂಗಿ, ಎನ್. ಶಂಕರೆಪ್ಪ, ಪಿ.ಎನ್. ಅಗನಾಶಣಿಕರ, ಪಿ.ಎಫ್. ಗವೇನವರ, ಶ್ರೀ ಗಿರಿಯಜ್ಞನಾಥ, ಎ.ಎಚ್. ಹಾವನೂರು, ಎ.ಕೆ. ಶಿವಪ್ಪ ಸೇರಿದಂತೆ ಒಟ್ಟು 10 ಶಿಕ್ಷಕರನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ ಮಾಡಿದ್ದು, 10 ಶಿಕ್ಷಕರು ನಡೆಸುವ ಮೌಲ್ಯಮಾಪನಾ ಕಾರ್ಯಕ್ಕೆ ಸಂಯೋಜಕರಾದ ಕವಿತಾ ಎಸ್.ಜೆ ಮತ್ತು ಕೀರ್ತಿನಾಥ ಕರಿಯಲ್ಲಪ್ಪನವರ ಸಹಕಾರ ನೀಡಲಿದ್ದಾರೆಂದು ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ ತಿಳಿಸಿದರು.