ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸದ್ಭಾವನೆಯಿಂದ ಬದುಕೋಣ: ಬಣಕಾರ

Mainashree
Updated On : 30 Aug 2013, 10:37 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 29
ಜಾತಿ-ಮತ, ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ ಎಂಬ ಭೇದ ಮಾಡದೆ ನಾವೆಲ್ಲ ಒಂದೇ ಎಂಬ ಸದ್ಭಾವನೆಯಿಂದ ಇದ್ದರೆ ಸಹಬಾಳ್ವೆ ಹಾಗೂ ಸಮಾಜಮುಖಿ ಬದುಕು ಸಾಧ್ಯ ಎಂದು ಪ್ರಾಂಶುಪಾಲ ಪ್ರೊ೤ ಎನ್.ಬಿ. ಬಣಕಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್ನೆಸ್ಸೆಸ್ ಘಟಕ ಏರ್ಪಡಿಸಿದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರು ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಬದುಕಿನಲ್ಲಿ ಸಮಸ್ಯೆಗಳು ಬರಲಾರವು ಎಂದರು.
ಎಲ್ಲ ವಿಷಯಗಳಲ್ಲಿ ಚರ್ಚೆ, ಹೊಂದಾಣಿಕೆ ಮನೋಭಾವ ಬೆಳೆಸಿಕೊಂಡರೆ ದ್ವೇಷಾಸೂಯೆ ದೂರವಾಗಿ ಸಾಮರಸ್ಯದಿಂದ ಬಾಳಲು ಸಾಧ್ಯ ಎಂದರು.
ಎನ್ನೆಸ್ಸೆಸ್ ಅಧಿಕಾರಿ ಡಾ೤ ಪ್ರಕಾಶ ಹೊಳೇರ ಮಾತನಾಡಿ, ಭಾರತ ದೇಶ ನೈಸರ್ಗಿಕ ಲಕ್ಷಣಗಳಲ್ಲಿ ಧರ್ಮ, ಭಾಷೆ, ಉಡುಗೆ-ತೊಡುಗೆ, ಸಂಸ್ಕೃತಿಯಲ್ಲಿ ವೈವಿಧ್ಯದಿಂದ ಇದ್ದರೂ ಸದ್ಭಾವನೆಯ ತಳಹದಿಯಲ್ಲಿ ನಾವೆಲ್ಲ ಏಕತೆಯಿಂದ ಇದ್ದು, ಪ್ರಪಂಚಕ್ಕೆ ಮಾದರಿಯಾಗಿದ್ದೇವೆ. ಇದನ್ನು ಯುವಶಕ್ತಿ ಅರಿತರೆ ಬದುಕು ಸುಂದರವಾಗುತ್ತದೆ ಎಂದರು.
ಪ್ರೊ೤ ಇಂದುಮತಿ ಜೋಶಿ, ಪ್ರೊ೤ ಸಿ. ಮಂಜುನಾಥ, ಡಾ೤ ವೈ.ವೈ. ಜಾನಕರ, ಪ್ರೊ೤ ವಿ.ಎಲ್. ಪಾಟೀಲ ಮಾತನಾಡಿದರು. ಸ್ವಪ್ನಾ ಕೋಟಿ ಹಾಗೂ ಸಂಗಡಿಗರು ಎನ್ನೆಸ್ಸೆಸ್ ಗೀತೆ ಹಾಡಿದರು. ಸ್ವಯಂ ಸೇವಕ ಶೆಟ್ಟರ ಹಾಗೂ ಚೈತನ್ಯ ತುಪ್ಪದ ಸದ್ಭಾವನೆ ಕುರಿತು ಮಾತನಾಡಿದರು.  ಪ್ರಕಾಶ ಬಣಕಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement