ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 30 Aug 2013, 10:38 am

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಹಾವೇರಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ, (ಓಒಆಈಅ) ರವರ ನೇರ ಸಾಲ ಯೋಜನೆಯಲ್ಲಿ ಅವಧಿ ಸಾಲ, ಕಿರುಸಾಲ ಮತ್ತು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸಲು ಅರ್ಹ ಅಭ್ಯರ್ಥಿಗಳಿಂದ ಸೆಪ್ಟೆಂಬರ್ 11ರೊಳಗಾಗಿ ಅರ್ಜಿ  ಆಹ್ವಾನಿಸಲಾಗಿದೆ. ಈ ಸೌಲಭ್ಯ ಪಡೆಯಲು ಅಭ್ಯರ್ಥಿಗಳು ಮತೀಯ ಅಲ್ಪಸಂಖ್ಯಾತರು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಹಾಗೂ ಪಾಸರ್ ಪಂಗಡಕ್ಕೆ ಸೇರಿದವರಾಗಿರಬೇಕು. ಹಾವೇರಿ ಜಿಲ್ಲೆ ನಿವಾಸಿಗಳಾಗಿದ್ದು, 18ರಿಂದ 55 ವರ್ಷದೊಳಗಿನವಾರಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ರು. 81,000 ಮತ್ತು ನಗರ ಪ್ರದೇಶದವರಿಗೆ ರು. 1,03,000 ಮಿತಿಯೊಳಗಿರಬೇಕು. ಕೃಷಿ, ತೋಟಗಾರಿಕೆ, ನೀರಾವರಿ ಸೇರಿದಂತೆ ಎಲ್ಲಾ ವ್ಯಾಪಾರಿ ಚಟುವಟಿಕೆಗಳಿಗೆ ರು. 50 ಸಾವಿರದವರೆಗೆ ಸಾಲ ಪಡೆಯಬಹುದಾಗಿದೆ. ಈ ಸಾಲ ಪಡೆಯಲಿಚ್ಛಿಸುವ ಫಲಾಪೇಕ್ಷಿಗಳು ಒಬ್ಬ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಅಥವಾ ಸಾಲ ಬಯಸುವ ಮೊತ್ತಕ್ಕೆ ಸಮನಾದ ಇಲ್ಲವೆ ಅದಕ್ಕೂ ಹೆಚ್ಚು ಬೆಲೆಯ ಸ್ಥಿರಾಸ್ತಿ ಹೊಂದಿರುವವರು ಅವರ ಆಸ್ತಿಯನ್ನು ನಿಗಮಕ್ಕೆ ಮಾರ್ಟ್‌ಗೇಜ್ ಮಾಡಿಕೊಡುವುದು ಅಥವಾ ನಿಗಮದಿಂದ ನೀಡುವ ಸಾಲಕ್ಕೆ ಬ್ಯಾಂಕುಗಳಿಂದ ನೀಡುವ ಬ್ಯಾಂಕ್ ಗ್ಯಾರಂಟಿಯನ್ನು (ನಿಗಮದ ಹೆಸರಿನಲ್ಲಿ ಅರ್ಜಿದಾರರ ಪರವಾಗಿ ಇಖಅ ಸೌಲಭ್ಯದೊಂದಿಗೆ) ನೀಡಬಹುದಾಗಿದೆ. ಇದರ ಜತೆಗೆ ಅರ್ಜಿದಾರರಿಂದ ಪೋಸ್ಟ್ ಡೇಟೆಡ್ ಸಹಿ ಮಾಡಿದ 10 ಚೆಕ್ ಲೀಫ್ ಕೊಡಬೇಕಾಗಿರುತ್ತದೆ. ಮತೀಯ ಅಲ್ಪಸಂಖ್ಯಾತರ ಪಂಗಡಕ್ಕೆ ಸೇರಿದ ಉನ್ನತ ಅಭಿವೃದ್ಧಿ ಕೌಶಲ್ಯ ಕೋರ್ಸ್ ಸೇರಿದಂತೆ ವಿವಿಧ ವೃತ್ತಿಪರ ಹಾಗೂ ಉದ್ಯೋಗ ಆಧಾರಿತ ಸ್ನಾತಕೋತ್ತರ ಪದವಿ ಅಧ್ಯಯನ ವಿದೇಶದಲ್ಲಿ ವ್ಯಾಸಂಗ ಮತ್ತಿತರ ಶೈಕ್ಷಣಿಕ ಕೋರ್ಸ್ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ರು. 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಸ್ವ-ಸಹಾಯ ಸಂಘವು ರಚನೆಯಾಗಿ ಬ್ಯಾಂಕಿನಲ್ಲಿ ಖಾತೆ ಹೊಂದಿ ಕನಿಷ್ಠ ಎರಡು ವರ್ಷವಾಗಿರಬೇಕು ಹಾಗೂ ಬಿಪಿಎಲ್ ಕಾರ್ಡ್‌ದಾರರಾಗಿರಬೇಕು. ಗ್ರೂಪ್ ಚಟುವಟಿಕೆ ಮಾಡುವ ಅಥವಾ ಪ್ರತ್ಯೇಕ ಚಿಕ್ಕ ಚಿಕ್ಕ ವ್ಯಾಪಾರದಲ್ಲಿ ನಿರತರಾಗಿರಬೇಕು ಮತ್ತು ಸಂಘದಲ್ಲಿ ಒಂದು ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನರಿದ್ದಲ್ಲಿ ಒಬ್ಬರಿಗೆ ಮಾತ್ರ ಸಾಲ ನೀಡಲಾಗುವುದು. ರು. 50 ಸಾವಿರವರೆಗೆ ಸಾಲ ಪಡೆದವರು 36(ಮಾಸಿಕ) ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ನೇರ ಸಾಲ ಯೋಜನೆಯಲ್ಲಿ ನೀಡುವ ಎಲ್ಲ ಸಾಲಕ್ಕೆ ಶೇ. 6ರಂತೆ ಬಡ್ಡಿ ವಿಧಿಸಲಾಗುವುದು. ಯೋಜನೆಗಳಲ್ಲಿ ಸಹಾಯಧನ ಇರುವುದಿಲ್ಲ. ಸಾಲ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರು ಜಿಲ್ಲಾ ಕಚೇರಿ ಅಥವಾ ಢಿಢಿಢಿ.್ಞಟಜ್ಛ.್ಞಛ್ಠ.ಟ್ಝ್ಛಿ.್ಝಟಿರಲ್ಲಿ ಸಾಲದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ರೂಮ ನಂ-26, ಒಂದನೇ ಮಹಡಿ, ಬಿ ಬ್ಲಾಕ್, ಜಿಲ್ಲಾಡಳಿತ ಭವನ, ಹಾವೇರಿ  ಇವರಿಗೆ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement