ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಚಿವ ಸಂಪುಟದಲ್ಲಿ ಮಾನೆಗೆ ಸ್ಥಾನ ನೀಡಿ

Vishwanath S
Updated On : 2 Dec 2013, 12:00 pm

ಹಾನಗಲ್ಲ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕ್ಷತ್ರಿಯ ಮರಾಠಾ ಸಮಾಜಕ್ಕೆ ಪ್ರಾತಿನಿದ್ಯ ನೀಡುವ ಅಗತ್ಯವಿದ್ದು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನು ಮಂತ್ರಿಯನ್ನಾಗಿ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಕ್ಷತ್ರೀಯ ಮರಾಠಾ ಪರಿಷತ್ ರಾಜ್ಯ ಉಪಾಧ್ಯಕ್ಷ ವೈ.ಎಫ್. ಕಿತ್ತೂರ ಒತ್ತಾಯಿಸಿದ್ದಾರೆ.
ಹಾನಗಲ್ಲಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರಿಯ ಮರಾಠಾ ಪರಿಷತ್ ರಾಜ್ಯದ ಮುಖ್ಯಮಂತ್ರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಸುಳ್ಳು ಆಪಾದನೆ ಮೇಲೆ ಸಂತೋಷ ಲಾಡ್ ಅವರನ್ನು ರಾಜಿನಾಮೆಗೆ ಒತ್ತಾಯಿಸಲಾಗಿತ್ತು. ಸಂತೋಷ ಲಾಡ್ ಯಾವುದೆ ತಪ್ಪು ಮಾಡಿಲ್ಲ. ಆದರೆ, ಅವರ ಮೇಲಿನ ಆಪಾದನೆಗಾಗಿ ಅಧಿಕಾರಕ್ಕೆ ಆಸೆ ಪಡದೆ ಪ್ರಾಮಾಣಿಕವಾಗಿ ರಾಜಿನಾಮೆ ನೀಡಿ, ತನಿಖೆಗೆ ಅನುವು ಮಾಡಿಕೊಟ್ಟಿದ್ದಾರೆ.
ಸಂತೋಷ ಲಾಡ್ ರಾಜಿನಾಮೆಯಿಂದ ತೆರವಾದ ಸಚಿವ ಸಂಪುಟದ ಸ್ಥಾನವನ್ನು ಶ್ರೀನಿವಾಸ ಮಾನೆ ಅವರಿಗೆ ನೀಡಬೇಕು. ಈ ಮೂಲಕ ಕ್ಷತ್ರಿಯ ಸಮಾಜದ ಪ್ರಾತಿನಿಧ್ಯವನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲೆಗೆ ಈವರೆಗೂ ಮಂತ್ರಿ ಸ್ಥಾನ ನೀಡಿಲ್ಲ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸಿದ, ನಾಲ್ಕು ಬಾರಿ ಶಾಸಕರಾಗಿ ಹಾನಗಲ್ಲ ತಾಲೂಕು ಪ್ರತಿನಿಧಿಸಿದ ಮನೋಹರ ತಹಶೀಲ್ದಾರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪರಿಷತ್ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ತಾಲೂಕು ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ವಿಷ್ಣುಕಾಂತ ಜಾಧವ, ಉಪಾಧ್ಯಕ್ಷ ಶಿವಾಜಿ ಆರೇರ, ಗಜಾನನ ದೋಂಗಡೆ, ಆನಂದಪ್ಪ ಜಾಧವ, ವಿಜಯ ಪವಾರ, ಪ್ರಕಾಶ ಚೋಳಪ್ಪನವರ, ಚಂದ್ರಶೇಖರ ಸಾಳುಂಕೆ. ಪಿ.ಕೆ. ಪಾರಗಾಂಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement