ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಹೋದರರ ಆತ್ಮಹತ್ಯೆ

Mainashree
Updated On : 1 Dec 2013, 9:38 am

ಹೂವಿನಹಡಗಲಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಹೋದರರ ನಡುವಿನ ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯ ಕಂಡಿದ್ದು, ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಪಟ್ಟಣದ ಎಂ.ಪಿ. ಪ್ರಕಾಶ್ ನಗರ ವಾಸಿಗಳಾಗಿದ್ದ ಸೊಪ್ಪಿನ ಮಲ್ಲಿಕಾರ್ಜುನ (31), ಸೊಪ್ಪಿನ ನಾಗಭೂಷಣ (25) ಆತ್ಮಹತ್ಯೆ ಮಾಡಿಕೊಂಡಿರುವ ಸಹೋದರರು. ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಮನನೊಂದು ನಾಗಭೂಷಣ್ ವಿಷ ಸೇವಿಸಿದ್ದರು. ಅವರ ಅಣ್ಣ ಸೊಪ್ಪಿನ ಮಲ್ಲಿಕಾರ್ಜುನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಿದ್ದರು. ತೀವ್ರ ಅಸ್ವಸ್ಥನಾಗಿದ್ದ ನಾಗಭೂಷಣ್ ಬದುಕಿ ಉಳಿಯುವುದು ಕಷ್ಟ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ ಮಲ್ಲಿಕಾರ್ಜುನ ಮನೆಗೆ ತೆರಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement