ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರೌಢಶಾಲಾ ಮಕ್ಕಳ ಗೊಂದಲ ನಿವಾರಣೆಗೆ ಕಾರ್ಯಾಗಾರ: ಬೊಮ್ಮಾಯಿ

Vishwanath S
Updated On : 3 Dec 2013, 11:09 am

ಶಿಗ್ಗಾಂವಿ: ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಒಂದು ದಿನದ ಕಾರ್ಯಾಗಾರವನ್ನು ಜನವರಿಯಲ್ಲಿ ನಡೆಸಲಾಗುವುದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಹೋತನಳ್ಳಿ ಸರ್ಕಾರಿ ಪ್ರೌಢಶಾಲೆಯ 4 ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಪ್ರೌಢಶಿಕ್ಷಣ ಮುಗಿಸಿದ ಮೇಲೆ ಹೇಗೆ ಶಿಕ್ಷಣ ಮುಂದುವರಿಸಬೇಕು, ಯಾವ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚು, ಡಿಪ್ಲೋಮಾ-ಐಟಿಐ ಮಾಡಿದರೆ ಏನಾಗುತ್ತದೆ, ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡರೆ ಅವಕಾಶಗಳೇನು ಎಂಬ ಮಾರ್ಗದರ್ಶನ ನೀಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಸಾಧನೆಗೆ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ತಾಪಂ ಅಧ್ಯಕ್ಷೆ ಸುಜಾತಾ ಕಲ್ಕಟ್ಟಿ, ಜಿಪಂ ಸದಸ್ಯೆ ಸರೋಜಮ್ಮ ಆಡಿನ, ಶಶಿಧರ ಹೊನ್ನಣ್ಣವರ, ಬಿ.ಟಿ. ಇನಾಮತಿ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಸದಸ್ಯೆ ಶಾಂತಮ್ಮ ಬೊಮ್ಮನಳ್ಳಿ. ಗ್ರಾಪಂ ಸದಸ್ಯ ಬಡಿಗೇರ, ಎಸ್‌ಡಿಎಂಸಿ ಸದಸ್ಯ ನಾಗಯ್ಯ ಮಠದ, ಶೇಕಣ್ಣ ಬೆಂಚಳ್ಳಿ, ರುದ್ರಗೌಡ್ರ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ, ಶಿಕ್ಷಕಿ ಹೀರಾಬಾಯಿ, ವಿಜಯಕುಮಾರ ಇದ್ದರು. ಮಖ್ಯ ಶಿಕ್ಷಕ ಶೇಖರ ಹಂಚಿನಮನಿ ಸ್ವಾಗತಿಸಿದರು. ಆರ್.ಎಸ್. ಹೆಸರೂರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement