ಏಡ್ಸ್ ಜಾಗೃತಿ ಜಾಥಾ
ಹಾವೇರಿ: ಏಡ್ಸ್ ದಿನಾಚರಣೆ ಅಂಗವಾಗಿ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಏಡ್ಸ್ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ವಿದ್ಯಾನಗರ, ರಾಜೇಂದ್ರ ನಗರ ಮೂಲಕ ಜೆ.ಎಚ್. ಪಟೇಲ್ ವೃತ್ತಕ್ಕೆ ಜಾಥಾ ಸಾಗಿತು. ಪ್ರಾಂಶುಪಾಲ ಎಚ್.ಎಸ್. ಚಿನ್ನಿಕಟ್ಟಿ, ಉಪನ್ಯಾಸಕ ಎಸ್.ಬಿ. ದೊಡ್ಡಮನಿ, ಎಸ್.ಸಿ. ಹಿರೇಮಠ, ಖಾಜಾ ಮೈನೂದ್ದೀನ್, ಜೆ.ಡಿ. ಕೊರಗರ ಇದ್ದರು.