ಬೂದಯ್ಯ ಮಠಕ್ಕೆ ನೂತನ ಪೀಠಾಧಿಪತಿ
ಹಿರೇಕೆರೂರು: ತಾಲೂಕಿನ ಸತಗಿಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಪ್ರಾಚೀನ ಬೂದಿಸ್ವಾಮಿ ಮಠದ ಉಸ್ತುವಾರಿ ನೋಡಿಕೊಳ್ಳಲು ಕೆ.ಎಂ. ಬೂದೆಯ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು.
ಮೂರು ವರ್ಷಗಳ ಹಿಂದೆ ಮಠಾಧೀಶ ಕೆ.ಎಂ. ಸಿದ್ದಯ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಮಠದಲ್ಲಿ ಜರುಗಿದ ಸಭೆಯಲ್ಲಿ ಕೊಂಡಜ್ಜಿ ವಂಶಸ್ಥರು ಹಾಗೂ ಸತಗಿಹಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಬೂದೆಯ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀಗಳು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತ, ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹರಿಹರ ತಾಲೂಕಿನ ಕೊಂಡಜ್ಜಿ ವಂಶಸ್ಥರ ಹಿರಿಯರಾದ ಕೆ.ಎಂ. ಬಸವರಾಜಯ್ಯ ತಿಳಿಸಿದರು. ನಿವೃತ್ತ ತಹಸೀಲ್ದಾರ್ ಕೆ.ಎಂ. ವಿಶ್ವನಾಥಯ್ಯ, ಕೆ.ಎಂ. ವಿರೂಪಾಕ್ಷಯ್ಯ, ಕೆ.ಎಂ. ಕುಮಾರಯ್ಯ, ಕೆ.ಎಂ. ಬಸವರಾಜಯ್ಯ, ಕೆ.ಎಂ. ಬೂದಯ್ಯ, ಕೆ.ಎಂ. ಮಾದೇವಯ್ಯ, ಸತಗಿಹಳ್ಳಿ ಗ್ರಾಮದ ಸಿದ್ದಪ್ಪ ಬಣಕಾರ, ಪಿ.ಎನ್. ಗೌಡ್ರ, ಎಂ.ಬಿ. ಪಾಟೀಲ, ನಾಗರಾಜ ಮೇದೂರ, ಬಸಪ್ಪ ಮೂಲಿಮನಿ, ಬಿ.ಆರ್. ಮರಿಗೌಡರ, ಗ್ರಾಪಂ ಮಾಜಿ ಸದಸ್ಯ ನಕಲೇಶಪ್ಪ ಓಲೇಕಾರ, ಗವಿಗೌಡ ಮರಿಗೌಡ್ರ, ಗುರುನಾಥಪ್ಪ ಮಕರಿ, ಜಯಪ್ಪ ಕುರುಬರ, ಬೂದೆಪ್ಪ ಹೆಗಡೇರ, ಮಲ್ಲಪ್ಪ ಕುರುಬರ, ಪಕ್ಕೀರಪ್ಪ ಕುರುಬರ ಉಪಸ್ಥಿತರಿದ್ದರು.