ಸ್ವಾವಲಂಬಿಗಳಾಗಿ ಬದುಕಿ: ಹೊಂಬರಡಿ
ರಾಣಿಬೆನ್ನೂರು: ಜನರನ್ನು ಸಾಕ್ಷರರನ್ನಾಗಿಸಿ, ಸ್ವ-ಉದ್ಯೋಗದ ಮೂಲಕ ಆರ್ಥಿಕಾಭಿವೃದ್ಧಿಗೆ ಸಹಕರಿಸುವುದು ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಲೋಕ ಶಿಕ್ಷಣ ಸಮಿತಿಯ ತಾಲೂಕು ಸಂಯೋಜಕ ಆರ್.ಡಿ. ಹೊಂಬರಡಿ ಹೇಳಿದರು.
ತಾಪಂ, ಲೋಕ ಶಿಕ್ಷಣ ಸಮಿತಿ, ಲೋಕ ಶಿಕ್ಷಣ ಕೇಂದ್ರ ಆಶ್ರಯದಲ್ಲಿ ಬೇಲೂರು ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳ ಸ್ವಯಂ ಸೇವಕರಿಗೆ ಬೇಲೂರು ಹಿಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ 4 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದಾಗ 1912ರಲ್ಲಿ 7 ಸಾವಿರ ರಾತ್ರಿ ಶಾಲೆ ಆರಂಭಿಸಿ ಅನಕ್ಷರತೆ ನಿವಾರಣೆಗೆ ಹೆಜ್ಜೆಯಿಟ್ಟಿದ್ದರು. ಈಗ ಎಲ್ಲರೂ ಸೇರಿ ಅನಕ್ಷರತೆ ವಿರುದ್ಧ ಹೋರಾಡಬೇಕಿದೆ ಎಂದರು.
ಬೇಲೂರು ಗ್ರಾಪಂ ಅಧ್ಯಕ್ಷ ಹಾಲೇಜ ಭಾರ್ಕಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಹಾಲಪ್ಪ ಲಮಾಣಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು. ಸದಸ್ಯರಾದ ಬಸವರಾಜ ಚಳಗೇರಿ, ನಿಂಗಪ್ಪ ಕರಡೆಮ್ಮನವರ, ಚೌಡಪ್ಪ ಮಾಳಗಿ, ಲಲಿತಮ್ಮ ಕಮ್ಮಾರ, ಪ್ರಧಾನ ಗುರುಮಾತೆ ಎಂ.ಎಂ. ವಿಭೂತಿ ಮಾತನಾಡಿದರು. ಸಂಪನ್ಮೂಲ ಶಿಕ್ಷಕ ಎಂ. ಬಸವನಗೌಡ 32 ಸ್ವಯಂ ಸೇವಕರಿಗೆ ಪ್ರಮಾಣವಚನ ಬೋಧಿಸಿದರು. ಪಕ್ಕಿರಪ್ಪ ಕಾಳಿ, ಹನುಮಂತಪ್ಪ ಮೂಲಂಗಿ, ಶಾರದಮ್ಮ ಕಾಳಿ, ಮಾಲತೇಶ ಹರವಿ, ಲಕ್ಷ್ಮಣ ಲಮಾಣಿ, ನಿಂಗಪ್ಪ ನಿಂಬಣ್ಣನವರ, ಗ್ರಾಪಂ ಪ್ರೇರಕ ದಿಳ್ಳೆಪ್ಪ ಭಾರ್ಕಿ, ಜ್ಯೋತಿ ಚಳಗೇರಿ ಇದ್ದರು.