ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ದತ್ತ ದೇಗುಲ ವರ್ಧಂತಿ

Vishwanath S
Updated On : 5 Dec 2013, 11:09 am

ಹಾನಗಲ್ಲ: ದತ್ತ ದೇವಸ್ಥಾನದ ನವೀಕೃತ ಕಟ್ಟಡದ ದ್ವಿತೀಯ ದಶಮಾನೋತ್ಸವ, 95ನೇ ವರ್ಷದ ದತ್ತ ಜಯಂತಿ ಉತ್ಸವ ಹಾಗೂ ಚೈತನ್ಯದತ್ತ ವೇದ ಸಂಸ್ಕೃತ ಪಾಠ ಶಾಲೆ ದಶಮಾನೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪಟ್ಟಣದ ಶ್ರೀದತ್ತ ದೇವಸ್ಥಾನದಲ್ಲಿ ಡಿ. 6ರಿಂದ 18ರ ವರೆಗೆ ನಡೆಯಲಿವೆ.
ಡಿ. 6ರಿಂದ ನಿತ್ಯ ಬೆಳಗ್ಗೆ 5ಕ್ಕೆ ನಗರ ಸಂಕೀರ್ತನೆ, ಕಾಕಡಾರತಿ, ಮಹಾರುದ್ರಾಭಿಷೇಕ, ಸಂಜೆ 7ಕ್ಕೆ ಪಲ್ಲಕ್ಕಿ ಸೇವೆ, ದೀಪೋತ್ಸವ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ ನಡೆಯಲಿವೆ. ಡಿ. 10ರಂದು ಗುರುಚರಿತ್ರೆ ಪಾರಾಯಣ ಪ್ರಾರಂಭ, 13ರಂದು ಸಂಜೆ 5 ಗಂಟೆಗೆ ಗೀತಾಜಯಂತಿ ಅಂಗವಾಗಿ ಸುವಾಸಿನಿಯರಿಂದ ಲಕ್ಷ ಕುಂಕುಮಾರ್ಚನೆ, 14ರಂದು ಶನಿಪ್ರದೋಶಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಡಿ. 15ರಂದು ಪಂಚಾಯತನ ಹೋಮ, ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿವೆ.
ಡಿ. 16ರಂದು ಶ್ರೀದತ್ತ ಜಯಂತಿ, ಶ್ರೀ ಗುರು ಚರಿತ್ರೆ ಪಾರಾಯಣ ಮುಕ್ತಾಯ, ಮಹಾರುದ್ರಾಭಿಷೇಕ ಸಮಾಪ್ತಿ, ಬೆಳಗ್ಗೆ 9ಕ್ಕೆ ಶೋಭಾಯಾತ್ರೆ, ಮಧಾಹ್ನ 12ಕ್ಕೆ ತೊಟ್ಟಿಲೋತ್ಸವ, ಸಂಜೆ 6.30ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿವೆ. ಡಿ. 17ರಂದು ಬೆಳಗ್ಗೆ 9ಕ್ಕೆ ದತ್ತ ಹೋಮ, ಪೂರ್ಣಾಹುತಿ, ಮಹಾನೈವೇದ್ಯ ಹಾಗೂ ಅನ್ನಸಂತರ್ಪಣೆ ಇದೆ. ಡಿ. 18ರಂದು ಮಧಾಹ್ನ 12ಕ್ಕೆ ಮಧುಕರಿ ಸೇವೆ, ಶ್ರೀದತ್ತ ವಿಗ್ರಹಕ್ಕೆ ಬುತ್ತಿಪೂಜೆ, ಮಹಾಮಂಗಳಾರತಿ, ಬೆಣ್ಣೆಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿವೆ ಎಂದು ದೇವಸ್ಥಾನದ ಅರ್ಚಕ ಮುಕುಂದ ಭಟ್ ಕಾಗಿನೆಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement