ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುರುವತ್ತಿ: ನಾಳೆ ಗೂಳಿ ಬಸವೇಶ್ವರ, ಗೌರಿ ದೇಗುಲ ಲೋಕಾರ್ಪಣೆ

Lingaraj Badiger
Updated On : 6 Dec 2013, 12:36 pm

ರಾಣಿಬೆನ್ನೂರು: ತಾಲೂಕಿನ ಚಿಕ್ಕ ಕುರುವತ್ತಿ ಗ್ರಾಮದಲ್ಲಿ ರು. 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗೂಳಿ ಬಸವೇಶ್ವರ ಹಾಗೂ ಗೌರಿ ದೇವಸ್ಥಾನಗಳ ಲೋಕಾರ್ಪಣೆ ಡಿ. 7ರಂದು ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಂಡಿರುವುದಾಗಿ ಮುಖಂಡರಾದ ಸಿ.ಸಿ. ಸಣ್ಣಗೌಡ್ರ, ಬಸವರಾಜಪ್ಪ ಹಲಗೇರಿ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ೤ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹರನಗಿರಿಯಲ್ಲಿರುವ ಹಿರೇಕುರುವತ್ತಿ ಹಿರೇಮಠದ ಸಿದ್ದನಂದೇಶ್ವರ ಶಿವಾಚಾರ್ಯ ಸ್ವಾಮಿಗಳು, ಚೌಡಯ್ಯದಾನಪುರ ಮತ್ತು ಮೈಲಾರ ಸಂಸ್ಧಾನಮಠದ ಚಿತ್ರಶೇಖರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಶಿವಯೋಗಿಗಳು, ರಾಣಿಬೆನ್ನೂರು ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು,ನರಶಿಪುದ ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಸ್ವಾಮಿಗಳು, ಗಂಗಾಪುರ ಸಿದ್ದಾರೂಢ ಮಠದ ಮರುಳ ಶಂಕರ ಸ್ವಾಮೀಜಿ ಆಗಮಿಸುವರು. ತೋಟಗಾರಿಕಾ ಸಚಿವ ಡಾ೤ ಶಾಮನೂರು ಶಿವಶಂಕರಪ್ಪ, ಶಾಸಕ ಕೆ.ಬಿ. ಕೋಳಿವಾಡ, ಮಾಜಿ ಶಾಸಕ ಜಿ. ಶಿವಣ್ಣ, ಡಾ೤ ಬಿ.ಜಿ. ಪಾಟೀಲ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ, ಮಾಜಿ ಸಚಿವ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ರುದ್ದಪ್ಪ ಲಮಾಣಿ, ನೆಹರು ಓಲೇಕಾರ, ಜಿಪಂ ಸದಸ್ಯೆ ಲಲಿತಾ ಜಾಧವ, ಉದ್ಯಮಿ ಬಿ.ಬಿ. ಕುರುಗೋಡಪ್ಪನವರ ಆಗಮಿಸುವರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಉಪನ್ಯಾಸ ನೀಡುವರು. ಕೆ.ಎಂ. ಬಣಕಾರ, ಎನ್.ಎಚ್. ಹೊನ್ನತ್ತೆಪ್ಪನವರ, ಸಿ.ಎನ್. ಕೆಂಪಗೌಡ್ರ, ಆರ್.ಎಸ್. ಚನ್ನಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement