ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನವ ಸಾಕ್ಷರರು ವೃತ್ತಿ ಕೌಶಲ ರೂಢಿಸಿಕೊಳ್ಳಿ: ನಾಗರತ್ನಾ ಹುಲ್ಲತ್ತಿ

Lingaraj Badiger
Updated On : 6 Dec 2013, 12:28 pm

ಬ್ಯಾಡಗಿ: ಸ್ವಾವಲಂಬಿಯಾಗಿ ಬದುಕಲು ಪ್ರತಿಯೊಬ್ಬರಿಗೂ ವೃತ್ತಿ ಇರಬೇಕು. ಅಂಥ ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಲು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಾಗುವಂತೆ ಸಂಯೋಜಕಿ ನಾಗರತ್ನಾ ಹುಲ್ಲತ್ತಿ ಕರೆ ನೀಡಿದರು.
ತಾಲೂಕಿನ ಕುಮ್ಮೂರ ಗ್ರಾಮದಲ್ಲಿ ಸಾಕ್ಷರತಾ ಸಮಿತಿ ಹಾಗೂ ಜಿಲ್ಲಾ ಜನ ಶಿಕ್ಷಣ ಸಂಸ್ಥಾನ ನವ ಸಾಕ್ಷರರಿಗಾಗಿ ಏರ್ಪಡಿಸಿದ್ದ ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಅಕ್ಷರ ಜ್ಞಾನ ಪಡೆದರೆ ಎಲ್ಲವನ್ನೂ ಪಡೆದಂತಾಗುವುದಿಲ್ಲ. ಶಿಕ್ಷಣ ಜೀವನದ ಒಂದು ಮುಖವಾದರೆ, ಉದ್ಯೋಗ ಅದರ ಇನ್ನೊಂದು ಮುಖ. ಅಕ್ಷರ ಜ್ಞಾನದ ಜತೆಗೆ ವೃತ್ತಿ ಕೌಶಲ್ಯವೂ ಇದ್ದರೆ ಸ್ವಾವಲಂಬಿ ಜೀವನ ಸಾಧ್ಯ ಎಂದರು.
ಸ್ವಾತಂತ್ರ್ಯ ಪಡೆದು ಆರೂವರೆ ದಶಕ ಗತಿಸಿದರೂ ದೇಶದಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳು ಜೀವಂತವಾಗಿವೆ. ಎಲ್ಲರೂ ವಿದ್ಯಾವಂತರು ಹಾಗೂ ವೃತ್ತಿಪರರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದರು. ಗ್ರಾಪಂ ಅಧ್ಯಕ್ಷೆ ಶಿವಕ್ಕ ಮುದ್ದಿನಕೊಪ್ಪ ಉದ್ಘಾಟಿಸಿದರು. ಉಪಾಧ್ಯಕ್ಷ ಬಸವಣ್ಣೆಪ್ಪ ದೊಡ್ಡಮ್ಮನವರ, ಅಭಿವೃದ್ಧಿ ಅಧಿಕಾರಿ ವೀರಣ್ಣ ತಳವಾರ, ಗೌರವ್ವ ಕೆಂಪನಿಂಗಣ್ಣನವರ, ತಾಲೂಕು ಸಾಕ್ಷರ ಸಂಯೋಜಕ ಆರ್.ಎಂ. ಪಾಟೀಲ, ಜನ ಶಿಕ್ಷಣ ಸಂಸ್ಥಾನದ ಸಂಯೋಜಕರಾದ ಎಸ್.ಎಂ. ಸಾಲಿಮಠ, ಸುರೇಶ ಹೊಸಮನಿ, ಹೊನ್ನಮ್ಮ ಮಾಸಣಗಿ ಇದ್ದರು. ರತ್ನಾ ಗುಳೇದ ಸ್ವಾಗತಿಸಿ ವಂದಿಸಿದರು. ಆರ್.ಬಿ. ದ್ಯಾಮಣ್ಣನವರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement