ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳು ಕ್ರಿಯಾಶೀಲರಾಗಲಿ: ಬಸಮ್ಮ ಅಬಲೂರು ಕರೆ

Lingaraj Badiger
Updated On : 6 Dec 2013, 12:27 pm

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 5
ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಬೆಳಗಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಮೂಲಕ ಜ್ಞಾನವಿಕಾಸಕ್ಕೂ ಪೂರಕವಾಗಿದೆ. ಶಿಕ್ಷಕರು ಮಕ್ಕಳನ್ನು ನಿರಂತರ ಕ್ರಿಯಾಶೀಲರಾಗಲು ಪ್ರೋತ್ಸಾಹಿಸಬೇಕು ಎಂದು ಕೋಡ ಕ್ಷೇತ್ರದ ಜಿಪಂ ಸದಸ್ಯೆ ಬಸಮ್ಮ ಅಬಲೂರ ತಿಳಿಸಿದರು.
ತಾಲೂಕಿನ ಕೋಡ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಜರುಗಿದ ಕೋಡ ಸಿಆರ್‌ಸಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕ್ಷೇತ್ರ ಸಮನ್ವಾಯಾಧಿಕಾರಿ ಎನ್. ಸುರೇಶಕುಮಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ವಾಸವಾಂಬ ವಿಜಾಪುರ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಚೌಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಪಂ ಸದಸ್ಯ ಸಣ್ಣಗೌಡ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ನಿಂಗನಗೌಡ್ರ, ಎ.ಡಿ. ಕುರುಬರ, ಗ್ರಾಮಸ್ಥರಾದ ವೀರನಗೌಡ ಪಾಟೀಲ, ಮರಿಯಮ್ಮ ಜೋಗೇರ, ಆರ್.ಎಫ್. ಹುಲ್ಲತ್ತಿ, ಈರಣ್ಣ ಗೋಣಿಮಠ. ಕೆ.ಎಲ್. ಚಿನ್ನಿಕಟ್ಟಿ, ಪಿ.ಎಸ್. ಸಾಲಿ, ಸೋಮಣ್ಣ ಪೂಜಾರ, ಪಾರ್ವತಮ್ಮ ತುಮರಿಕೊಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement