ಎಚ್ಚರಿಕೆಯ ಗಂಟೆ
ಶಿಗ್ಗಾಂವಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಎರಡು ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಘಂಟೆಯಾಗಿ ಪರಿಣಮಿಸಿದೆ ಎಂದು ಹರ ಗ್ರಾಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣನವರ ಹೇಳಿದರು. ಸಮಸ್ಯೆಗಳು ಹಾಗೂ ಮತದಾರರ ಕುರಿತಾದ ಹಿತಾಸಕ್ತಿ ಕಡಿಮೆಯಾಗಿ, ಕಾರ್ಯಕರ್ತರ ಕಡೆಗಣನೆ ಹೆಚ್ಚಾಗಿದೆ. ಸ್ವಾರ್ಥಕ್ಕಾಗಿ ಪಕ್ಷಗಳನ್ನು ಬಲಿ ಕೊಡುವ ಜನಪ್ರತಿನಿಧಿಗಳ ವರ್ತನೆ, ಅಧಿಕಾರದ ದುರ್ಬಳಕೆಯಿಂದಾಗಿ ಪಕ್ಷಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗುವುದರಲ್ಲಿ ಸಂಶಯವಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ