ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್ ದುರಾಡಳಿತಕ್ಕೆ ಜನತೆ ಉತ್ತರ: ಬಳ್ಳಾರಿ

Rashmi Kasaragodu
Updated On : 9 Dec 2013, 11:16 am

ಬ್ಯಾಡಗಿ: ಕಾಂಗ್ರೆಸ್ ದುರಾಡಳಿತಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ನೀಡಿದ್ದು, ಕುಟುಂಬ ರಾಜಕಾರಣಕ್ಕೂ ಹಿನ್ನಡೆ ಆಗಿದೆ ಎಂದು ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಹಾಗೂ ಛತ್ತೀಸಗಢ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಕ್ಷದ ತಾಲೂಕು ಘಟಕ ಭಾನುವಾರ ಹಳೇ ಪುರಸಭೆ ಎದುರು ಆಯೋಜಿಸಿದ್ದ ವಿಜಯೋತ್ಸವದ ಬಳಿಕ ಅವರು ಮಾತನಾಡಿದರು. ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ ಇತ್ಯಾದಿ ಹಗರಣಗಳಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ವಿಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರು ದೇಶವನ್ನು 10 ವರ್ಷ ಆಳಿದರೂ ಬೆಲೆ ಏರಿಕೆ, ರುಪಾಯಿ ಅಪಮೌಲ್ಯ ತಡೆಯಲು ಸಾಧ್ಯವಾಗಲಿಲ್ಲ. ಮೋದಿ ಅಲೆ ಸ್ಪಷ್ಟವಾಗಿದೆ. ಆದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯಿಂದ ಸೋತಿದ್ದಾಗಿ ವಿಶ್ಲೇಷಿಸುತ್ತಿದೆ. ಆದರೆ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಸತತ 3ನೇ ಬಾರಿಗೆ ಅಧಿಕಾರಕ್ಕೇರಿದೆ. ಇದೇ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ಎಂದರು. ಶಂಕ್ರಪ್ಪ ಮಾತನವರ, ರಾಮಣ್ಣ ಉಕ್ಕುಂದ, ಶಂಕರಗೌಡ್ರ ಪಾಟೀಲ, ಮಲ್ಲಿಕಾರ್ಜುನ ದೊಡ್ಡಮನಿ, ಯಮನೂರಪ್ಪ ಉಜನಿ, ವೀರೇಂದ್ರ ಶೆಟ್ಟರ, ವೀರಭದ್ರಪ್ಪ ಹೊಮ್ಮರಡಿ, ಸುರೇಶ ಆಸಾದಿ, ಬಸವರಾಜ ಸಂಕಣ್ಣನವರ, ಮಾಲತೇಶ ದೊಡ್ಡಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement