ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ರಾಣಿಬೆನ್ನೂರು: ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ಹಾಗೂ ಛತ್ತೀಸಗಡ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದ ಸುದ್ದಿ ತಿಳಿದು ಇಲ್ಲಿನ ಅಂಚೆ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ವಿಜಯೋತ್ಸವದ ನೇತೃತ್ವ ವಹಿಸಿದ್ದರು. ಮಹಿಳಾ ಮೋರ್ಚಾದ ಭಾರತಿ ಜಂಬಗಿ, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣಕುಮಾರ ಅಂಗಡಿ, ಜಿಲ್ಲಾ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರಸಭೆ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ಉಮೇಶಪ್ಪ ಹೊನ್ನಾಳಿ, ವಿಶ್ವನಾಥ ಹೊಳೆಬಾಗಿಲ, ಕೆ.ಎನ್. ಕೋರಧಾನ್ಯಮಠ, ಯುವ ಮುಖಂಡ ರಾಜು ತಳವಾರ, ದೊಡ್ಡಪೇಟೆಯ ಚಂದ್ರಪ್ಪ ರೋಡ್ಡನವರ, ವೀರಣ್ಣ ಜಂಬಗಿ, ಖಾಜಾಸಾಬ್ ನೀಲಗಾರ, ಶಿವಪ್ಪ ಕಂಬಳಿ, ಚಂದ್ರಣ್ಣ ಕಂಬಳಿ, ದೇವರಾಜ ಎನ್, ಮಹಾವೀರ ಜೈನ್, ರಾಜಾಸಾಬ್ ಬಟ್ಟೂರು, ಡಿ.ಸಿ. ಹೊಟ್ಟಿಗೌಡ್ರ ಇದ್ದರು.