ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ವಿದ್ಯುತ್ ವ್ಯತ್ಯಯ

Lingaraj Badiger
Updated On : 10 Dec 2013, 11:33 am

ಹಾವೇರಿ: ತಿಳವಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 10ರಂದು ತುರ್ತು ನಿರ್ವಹಣಾ ಕೆಲಸವಿರುವುದರಿಂದ 110 ಕೆ.ವಿ. ತಿಳವಳ್ಳಿಯಿಂದ ಸರಬರಾಜು ಆಗುವ ಎಲ್ಲ 11 ಕೆ.ವಿ ಫೀಡರ್‌ಗಳಿಗೆ ಮತ್ತು ಸದರಿ ಸ್ಟೇಶನ್‌ನಿಂದ ಸರಬರಾಜು ಆಗುವ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಾದ ಕಲಕೇರಿ ಮತ್ತು ಶೇಷಗಿರಿ ಸ್ಟೇಶನ್‌ಗಳಿಂದ ಸರಬರಾಜಾಗುವ ಎಲ್ಲ 11 ಕೆ.ವಿ ಮಾರ್ಗಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸದರಿ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಓ.ಎಸ್. ಶಶಿಧರ ಅವರು ವಿನಂತಿಸಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಹಾವೇರಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ(ಬಿಎ ತೃತೀಯ) ಪೂಜಾ ಶೇಷಗಿರಿ ಅವರು ಡಿ. 13ರಿಂದ 24ರ ವರೆಗೆ ಆಸ್ಸಾಂನ ತೇಜ್‌ಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಶಶಿಧರ ಎನ್. ಹೊಸಳ್ಳಿ (ಬಿಎ ದ್ವಿತೀಯ) ಅವರು ಆರ್.ಡಿ. ಕ್ಯಾಂಪ್‌ಗೆ ಹೋಗಿ ಬಂದಿದ್ದಾರೆ. ಸದರಿ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಜೆ.ಸಿ. ಹಾದಿಮನಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಎಂ.ಎಚ್. ಹೆಬ್ಬಳಾ, ಪ್ರೊ. ರಮೇಶ ತೇವರಿ ಹಾಗೂ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ಹಾವೇರಿ: ಸವಣೂರಿನ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 11ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಸದರಿ ಕೇಂದ್ರದಿಂದ ಹೊರ ಹೋಗುವ 11 ಕೆ.ವಿ. ಫೀಡರ್‌ಗಳಾದ ಸವಣೂರು ಪಟ್ಟಣ, ಯಲವಿಗಿ, ಕಾರಡಗಿ ಮತ್ತು ಕಳಸೂರು ಹಾಗೂ ಸದರಿ ಫೀಡರ್‌ಗಳಿಗೆ ಸಂಬಂಧಿಸಿದ ಎಲ್ಲ ಗ್ರಾಮಗಳಿಗೆ ಬೆಳಗ್ಗೆ 9ರಿಂದ 5 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸದರಿ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಓ.ಎಸ್. ಶಶಿಧರ ವಿನಂತಿಸಿದ್ದಾರೆ.
ರೈಲು ಸೇವೆ ವಿಸ್ತರಿಸಿ
ರಾಣಿಬೆನ್ನೂರು: ಹರಿಹರ-ಚಿತ್ರದುರ್ಗ ಮಧ್ಯೆ ಸಂಚರಿಸುತ್ತಿರುವ ರೈಲು ಗಾಡಿಗಳನ್ನು ರಾಣಿಬೆನ್ನೂರು ತನಕ ವಿಸ್ತರಿಸಬೇಕೆಂದು ಆಗ್ರಹಿಸಿ ರೇಲ್ವೆ ಸಚಿವರು, ಸಂಸದರು, ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗಿ ತಾಲೂಕು ರೇಲ್ವೆ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಕೆ.ಎನ್. ಕೋರಧಾನ್ಯಮಠ ತಿಳಿಸಿದ್ದಾರೆ. ಬೀಜ ಕಂಪನಿಗಳ ತವರೂರು, ಹತ್ತಿ ಮಾರುಕಟ್ಟೆಗೆ ಹೆಸರಾದ ರಾಣಿಬೆನ್ನೂರಿಗೆ ಹರಿಹರ, ಚಿತ್ರದುರ್ಗದಿಂದ ಸಾಕಷ್ಟು ಜನ ಓಡಾಡುತ್ತಾರೆ. ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement