ಏಡ್ಸ್ ಜಾಗೃತಿ ಮೂಡಿಸಲು ಮುಂದಾಗಿ
ಶಿಗ್ಗಾಂವಿ: ಎಚ್‌ಐವಿ ವಿರುದ್ಧ ಹೋರಾಡಲು ಯುವಜನತೆ ಮುಂದಾಗಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಹನುಮಂತಪ್ಪ ಎಚ್.ಸಿ. ಹೇಳಿದರು. ಶಿಗ್ಗಾಂವಿ ಪಟ್ಟಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರೆಡ್ ರಿಬ್ಬನ್ ಕ್ಲಬ್ ಮತ್ತು ಎನ್ನೆಸ್ಸೆಸ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲೂಕು ಏಡ್ಸ್ ಆಪ್ತ ಸಮಾಲೋಚಕಿ ಭುವನೇಶ್ವರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಆಪ್ತ ಸಮಾಲೋಚಕ ಪ್ರಭಾಕರ್ ದೈವಜ್ಞ, ಕಾಲೇಜಿ ಆಡಳಿತಾಧಿಕಾರಿ ವಿ.ಎಸ್. ಕಂಬಾಳಿಮಠ ಮಾತನಾಡಿದರು. ಏಡ್ಸ್ ವಿಷಯವಾಗಿ ಪ್ರಬಂದ ಸ್ಪರ್ಧೆ, ಭಿತ್ತಿಚಿತ್ರ ಸ್ಪರ್ಧೆ, ಸ್ಲೋಗನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇವುಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ಸಂಘಟಿಸಲಾಗಿತ್ತು. ಪುರಸಭೆ ಎದುರಿನ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಪ್ರಾಚಾರ್ಯ ಎಸ್.ವಿ. ಕುಲಕರ್ಣಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಸ್. ಸಿದ್ದಣ್ಣವರ್, ರೇವತಿ ಕೆರಮ್ಮನವರ್, ಎಫ್.ಎಸ್. ಶಿವಣ್ಣವರ್, ಎಂ.ಎಸ್. ಸಂಗಣ್ಣವರ್, ಎಸ್.ಬಿ. ಪೂಜಾರ್ ಇದ್ದರು.
--