ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಸಭೆ

Lingaraj Badiger
Updated On : 10 Dec 2013, 11:42 am

ಹಾನಗಲ್ಲ:  ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಹಾವೇರಿ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಎಸ್. ಕೂಕನಗೌಡ್ರ, ಜಿಲ್ಲೆಯಲ್ಲಿ 248 ಕೆರೆ ಬಳಕೆದಾರರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಇಲ್ಲಿಯವರೆಗೆ ಕೇವಲ 54 ಸಂಘಗಳು ಸದಸ್ಯತ್ವ ಪಡೆದಿವೆ. ಇನ್ನುಳಿದ ಸಂಘಗಳು ಬೇಗನೆ ಸದಸ್ಯತ್ವ ಪಡೆಯಬೇಕು. ಸದಸ್ಯತ್ವ ಪಡೆದ ಸಂಘಗಳು ತಮ್ಮ ಸಲಹೆ, ಸಮಸ್ಯೆ, ದೂರುಗಳೇನಾದರೂ ಇದ್ದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ತಿಳಿಸಿದರು. ಸದಸ್ಯತ್ವ ಪಡೆದ ಪ್ರತಿ ಸಂಘದ ಪದಾಧಿಕಾರಿಗಳು ಕಾಲ ಕಾಲಕ್ಕೆ ಆಯೋಜಿಸುವ ಸಭೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ಪ್ರತಿ ವರ್ಷವೂ ಸಂಘಗಳ ಲೆಕ್ಕ ತಪಾಸಣೆಯನ್ನು ಮಾಡಿಸಬೇಕು. ಸಂಘದ ನೋಂದಣಿಯನ್ನು ನವೀಕರಿಸಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಕೆರೆ ಬಳಕೆದಾರರ ಸಂಘಗಳ ಕುರಿತು ಸಮಗ್ರ ಮಾಹಿತಿ ಕಲೆಹಾಕಬೇಕೆಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಹಿರೇಕೇರೂರಿನ ಮೂಕಪ್ಪ ಅಗಸಿಬಾಗಿಲ, ಮಲ್ಲನಗೌಡ ನರೇಗೌಡ್ರ, ಶಿಗ್ಗಾವಿಯ ಹನುಮರೆಡ್ಡಿ ನಡುವಿನಮನಿ, ಚಂದ್ರಶೇಖರ ಮಾನೋಜಿ, ಹಾನಗಲ್ಲ ತಾಲೂಕಿನ ಶಿವಲಿಂಗಪ್ಪ ತಲ್ಲೂರ, ಸುರೇಶ ಕೋಟಿ, ಜೆ.ಬಿ. ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement