ನೆಲ್ಸನ್ ಮಂಡೇಲಾ ಮತ್ತೊಬ್ಬ ಶಾಂತಿದೂತ ಗಾಂಧಿ
ಹಾನಗಲ್ಲ: ಜಗತ್ತಿನ ಶಾಂತಿದೂತ ಮಹಾತ್ಮಾ ಗಾಂಧಿ ಅವರ ಆದರ್ಶಗಳನ್ನು ಅನುಸರಿಸಿದ ಆಫ್ರಿಕದ ನೆಲ್ಸನ್ ಮಂಡೇಲಾ ಶಾಂತಿ ಹಾಗೂ ಕ್ರಾಂತಿಯ ಮೂಲಕ ಕರಿಯ ಹಾಗೂ ಬಿಳಿಯರ ನಡುವಿನ ಭೇದ ಹೊಡೆದೋಡಿಸಲು ಯತ್ನಿಸಿ ಜಗತ್ತೇ ಗುರುತಿಸಿದ ಮಹಾತ್ಮಾ ಎಂದು ಪ್ರಾಚಾರ್ಯ ಎಸ್.ಸಿ. ಪೀರಜಾದೆ ನುಡಿದರು.
ಹಾನಗಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೆಲ್ಸನ್ ಮಂಡೇಲಾ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಸಾಹಿತಿ ಮಾರುತಿ ಶಿಡ್ಲಾಪುರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಮಹೇಂದ್ರ ಬಾರಿಕರ, ಉಪನ್ಯಾಸಕರಾದ ಎಸ್.ಬಿ. ಕಮಾಟಿ, ಟಿ. ಈಶ್ವರ, ಎಸ್.ವಿ. ರಶ್ಮಿ, ವೀಣಾ ದೇವರಗುಡಿ, ಎಸ್.ಪಿ. ಹೀರೂರ, ಎಸ್.ಎಸ್. ಹೊನ್ನತ್ತಿ ಈ ಸಂದರ್ಭದಲ್ಲಿದ್ದರು.
ಶ್ರದ್ಧಾಂಜಲಿ: ನೆಲ್ಸನ್ ಮಂಡೇಲಾ ಅವರ ಆತ್ಮಕ್ಕೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
--