ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಾರದರ್ಶಕ ಆಡಳಿತಕ್ಕೆ ಸಿಸಿ ಕ್ಯಾಮೆರಾ

Lingaraj Badiger
Updated On : 10 Dec 2013, 11:32 am

ಶಿಗ್ಗಾಂವಿ: ಸಾರ್ವಜನಿಕರ ಕುಂದುಕೊರತೆ, ಸಮಯಕ್ಕೆ ಸರಿಯಾಗಿ ಪುರಸಭೆ ಅಧಿಕಾರಿಗಳು ಸ್ಪಂದಿಸುವ ಹಾಗೂ ಪಾರದರ್ಶಕ ಆಡಳಿತ ನೀಡುವ ಸದುದ್ದೇಶದಿಂದ ಸಿಸಿ ಕ್ಯಾಮೆರ್ನಾ ಅಳವಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಡಿ.ಎನ್. ಹೇಳಿದರು.
ತಾಲೂಕಿನ ಬಂಕಾಪುರ ಪುರಸಭೆ ಕಾರ್ಯಾಲಯದಲ್ಲಿ ಸುಮಾರು ಎಂಟು ಸಿಸಿ ಕ್ಯಾಮೆರಾಗಳನ್ನ್ನು ಅಳವಡಿಸಲಾಗಿದೆ. ಇದಲ್ಲದೆ ಪುರಸಭೆಯ ವಿವಿಧ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಾಲಯದ ವೇಳೆಗೆ ಸರಿಯಾಗಿ ಬರುವ ಉದ್ದೇಶದಿಂದ ಅವರ ಹಾಜರಾತಿಗಾಗಿ ಬಯೋವುಟ್ರಿಕ್ ಕೂಡಾ ಅಳವಡಿಸಲಾಗಿದೆ ಎಂದು ಹೇಳಿದರು.
ಇಂಟರ್‌ಕಾಂ ಸೇರಿದಂತೆ ಇನ್ನ್ನು ಹಲವಾರು ವ್ಯವಸ್ಥೆಗಳನ್ನ್ನು ಮಾಡಲಾಗುವುದು ಎಂದರು. ಸಾರ್ವಜನಿಕರಿಗೆ ಇದು ಸಹಕಾರಿಯಾಗಲಿದ್ದು, ಇದರಿಂದ ಯಾವುದೇ ಕೆಲಸ ಮಾಡದೆ ಖಾಲಿ ಕೂಡ್ರೂವ, ಹರಟೆ ಹೊಡೆಯುವ ಪ್ರಮೇಯವೇ ಇಲ್ಲದಂತಾಗುತ್ತದೆ ಎಂದರು.
ಹಾವೇರಿ ಜಿಲ್ಲೆಯಲ್ಲಿಯೇ ಪುರಸಭೆಗೆ ಮೊಟ್ಟ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಿದ್ದು, ಬಂಕಾಪುರ ಪುರಸಭೆಯು ಮಾದರಿಯಾಗಿದೆ. ಇದಕ್ಕೆಲ್ಲ ಸುಮಾರು ಪುರಸಭೆ ನಿಧಿಯ ರು. 4 ಲಕ್ಷ ರು. 70 ಸಾವಿ ವೆಚ್ಚ ಮಾಡಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಬರುವ ದಿನಗಳಲ್ಲಿ ವಾಕಿಟಾಕಿಯನ್ನ್ನು ಅಳವಡಿಸಲಾಗುವುದು. ಬಂಕಾಪುರ ಪಟ್ಟಣದಲ್ಲಿ  ಸ್ವಚ್ಛತಾ ಆಂದೋಲನವನ್ನ್ನು ಹಮ್ಮಿಕೊಳ್ಳಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement