ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಗ್ಗಾಂವಿ: 16ರಂದು ಕೃಷಿ ಉತ್ಸವ-2013

Mainashree
Updated On : 11 Dec 2013, 11:45 am

ಶಿಗ್ಗಾಂವಿ: ಕೃಷಿಯಿಂದ ದೂರಾಗಿ ಪಟ್ಟಣದೆಡೆಗೆ ಮೂಖ ಮಾಡಿರುವ ರೈತನಿಗೆ ಮತ್ತೆ ಕೃಷಿಯತ್ತ ಆಕರ್ಷಿತನಾಗುವಂತೆ ಮಾಡಬೇಕಿದೆ. ಕೃಷಿ ಒಂದು ಲಾಭದಾಯಕ ಕ್ಷೇತ್ರ ಎಂಬುದು ರೈತನಿಗೆ ಮನವರಿಕೆ ಮಾಡಿಕೊಡುವ ಮಹತ್ತರ ಉದ್ದೇಶದಿಂದ ಶಿಗ್ಗಾಂವಿ ಪಟ್ಟಣದಲ್ಲಿ ಡಿ. 16ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಕೃಷಿ ಉತ್ಸವ 2013 ನಡೆಸಲಾಗುವುದು ಎಂದು ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೃಷಿ ಬಗ್ಗೆ ಆಸಕ್ತಿ ಕಡಿಮೆ ಮಾಡಿಕೊಳ್ಳುತ್ತಿರುವ ಇಂದಿನ ರೈತ ಸಮುದಾಯ ಪಟ್ಟಣದ ವ್ಯಾಪಾರದತ್ತ ಮೂಖ ಮಾಡುತ್ತಿದ್ದಾರೆ. ಅವೈಜ್ಞಾನಿಕ ಕೃಷಿ ಪದ್ಧತಿ, ತಂತ್ರಜ್ಞಾನ ಬಳಕೆಯ ಅರಿವಿನ ಕೊರತೆ ಸೇರಿದಂತೆ ಸಮಗ್ರ ಮಾಹಿತಿ ಕೊರತೆಯಿಂದ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಈ ಕಾಲಗಟ್ಟದಲ್ಲಿ ಕೃಷಿ ಬಗ್ಗೆ ಹೊಸ ಪ್ರೇರಣೆ ಮೂಡಿಸುವ ಸದುದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ಸಮಿತಿ, ಕೃಷಿ ಇಲಾಖೆ, ಭಾರತೀಯ ಕೃಷಿಕ ಸಮಾಜ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕೃಷಿ ಉತ್ಸವ 2013 ನಡೆಸಲು ತಿರ್ಮಾನಿಸಲಾಗಿದೆ ಎಂದರು.
ಉತ್ಸವದಲ್ಲಿ ಸಾವಯವ ಕೃಷಿ ಹಾಗೂ ಮಣ್ಣು, ನೀರಿನ ಸಂರಕ್ಷಣೆ, ಪಶುಪಾಲನೆಯಲ್ಲಿ ಅಧಿಕ ಇಳುವರಿಗಾಗಿ ಕಡಿಮೆ ಖರ್ಚಿನ ತಂತ್ರಜ್ಞಾನಗಳು, ಮಹಿಳಾ ಸಬಲೀಕರಣಕ್ಕೆ ಪೂರಕ ಸ್ವ-ಸಹಾಯ ಸಂಘ, ಕೀರು ಆರ್ಥಿಕ ವ್ಯವಹಾರ ಎಂಬ ಮೂರು ಗೋಷ್ಠಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. 60 ವಿವಿಧ ಮಳಿಗೆಗಳನ್ನು ರಚಿಸಲಾಗಿದ್ದು, ಅದರಲ್ಲಿ ಕೃಷಿ ಉಪಕರಣ, ವಾಹನ, ತಿಂಡಿ ತಿನಸು, ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳು, ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುವುದು ಹಾಗೂ ರೈತರಿಗಾಗಿ ಸಾಂಸ್ಕೃತಿಕ, ಕ್ರೀಡಾಕೂಟ, ಕಲಾತಂಡಗಳ ಪ್ರದರ್ಶನ ಇದೆ ಎಂದರು.
ಸಮಿತಿ ಗೌರವಾಧ್ಯಕ್ಷ ಶಂಕರಗೌಡ ಪಾಟೀಲ್, ಅಧ್ಯಕ್ಷ ಬಸವರಾಜ ಹೆಸರೂರ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹಾರುದ್ರಪ್ಪ ವಡವಟ್ಟಿ, ಸಿ.ಡಿ. ಪಾಟೀಲ್, ಸಂತೋಷ ಕಾಟೇಗಾರ, ನಂದೀಶ ಯಲಿಗಾರ ಇದ್ದರು. ಬಿ. ಗಂಗಮ್ಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement