ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 11 Dec 2013, 11:46 am

ಹೈನುಗಾರಿಕೆ ತರಬೇತಿ
ಹಾವೇರಿ: ಧಾರವಾಡ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಡಿ. 16ರಿಂದ 21ರ ವರೆಗೆ ರೈತರು, ರೈತ ಮಹಿಳೆಯರಿಗಾಗಿ ಹೈನುಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿಗೆ ಆಗಮಿಸುವ ಆಸಕ್ತರು ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿ, ಪರಿಶಿಷ್ಟ ಜಾತಿ-ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ ತರಬೇಕೆಂದು ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗೆ ಜಾ೤ ಜೇಂದಿ ವೈ.ಆರ್., ಮೊ. 98448 34926 ಸಂಪರ್ಕಿಸಬಹುದು.
ಪುಸ್ತಕ ದಾನಕ್ಕೆ ಮನವಿ
ಹಾವೇರಿ: ರಾಣಿಬೆನ್ನೂರಿನ ಸರ್ಕಾರಿ ಬಾಲಮಂದಿರದಲ್ಲಿ 15ರಿಂದ 18 ವಯೋವಾನದ 50 ಮಕ್ಕಳಿದ್ದು, ಅವರ ಜ್ಞಾನಭಂಡಾರ ಹೆಚ್ಚಿಸಲು ಗ್ರಂಥಾಲಯ ಆರಂಭಿಸಲಾಗಿದೆ. ಇಲ್ಲಿಗೆ ಪುಸ್ತಕಗಳ ಅಗತ್ಯವಿದ್ದು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಉಪಯುಕ್ತವಾದ ಹಳೆಯ -ಹೊಸ ಪುಸ್ತಕಗಳು ಇದ್ದಲ್ಲಿ ದಾನ ಮಾಡಲು ಪರವೀಕ್ಷಣಾಧಿಕಾರಿ ಕೋರಿದ್ದಾರೆ. ಮಾಹಿತಿಗೆ ಕಚೇರಿ ದೂ. 08373-266289, ಮೊ. 99002 57227 ಸಂಪರ್ಕಿಸಬಹುದು.
13ರಂದು ಸಮ್ಮೇಳನ
ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಚಿತ್ರದುರ್ಗದ ಅಲ್ಲಮ ಪ್ರಭು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಫಾಸಿಲ್ಸ್ ಸಂಸ್ಥೆಯ ರಾಜ್ಯಮಟ್ಟದ ಒಂದು ದಿನದ ಸಮ್ಮೇಳನವನ್ನು ಡಿ. 13ರಂದು ಆಯೋಜಿಸಿದೆ. ಹಂಪಿ ಕನ್ನಡ ವಿವಿ ಕುಲಪತಿ ಪ್ರೊ೤ ಹಿ.ಚಿ. ಬೋರಲಿಂಗಯ್ಯ ಸಮ್ಮೇಳನ ಉದ್ಘಾಟಿಸುವರು. ಜಾನಪದ ವಿವಿ ಕುಲಪತಿ ಪ್ರೊ೤ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಡಾ೤ ಡಿ.ಬಿ. ನಾಯಕ್, ಫಾಸಿಲ್ಸ್‌ನ ಸಂಪರ್ಕ ಕಾರ್ಯದರ್ಶಿ ಪ್ರೊ೤ ಎಚ್.ಎಂ. ಮಹೇಶ್ವರಯ್ಯ, ಕಾರ್ಯದರ್ಶಿ ಪ್ರೊ೤ ರಾಘವನ್ ಪಯ್ಯನಾಡ್ ಉಪಸ್ಥಿತರಿರುತ್ತಾರೆ. ಸಮ್ಮೇಳನದಲ್ಲಿ ಜನಪದ ಕಲೆ ಮತ್ತು ಜಾಗತೀಕರಣ, ದೇಶೀ ಕೃಷಿ ತಂತ್ರಜ್ಞಾನದ ಪ್ರಸ್ತುತತೆ, ಜನಪದ ವೈದ್ಯ ಮತ್ತು ಆಧುನಿಕ ವೈದ್ಯಪದ್ಧತಿ,  ಗ್ರಾಮೀಣ ಹಾಗೂ ಬುಡಕಟ್ಟು ನಿರ್ವಹಣೆ ್ನಕುರಿತು ಪ್ರಬಂಧ ಮಂಡನೆ ಆಗಲಿವೆ. ಪ್ರಬಂಧದ ಕರಡು ಹಾಗೂ ನೋಂದಣಿ ಶುಲ್ಕ ಸಲ್ಲಿಸದವರು ಡಿ. 13ರಂದು ಬೆಳಗ್ಗೆ ಖುದ್ದು ಹಾಜರಾಗಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಫಾಸಿಲ್ಸ್ ಪ್ರಾದೇಶಿಕ ಕಾರ್ಯದರ್ಶಿ ಪ್ರೊ೤ ಸ.ಚಿ. ರಮೇಶ್, ಸಮ್ಮೇಳನದ ಆಯೋಜಕ ಕಾರ್ಯದರ್ಶಿ ಡಾ೤ ಕೆ. ಪ್ರೇಮಕುಮಾರ  ತಿಳಿಸಿದ್ದಾರೆ.
15ರಂದು ಸನ್ಮಾನ
ಶಿಗ್ಗಾಂವಿ: ರಾಷ್ಟ್ರೀಯ ನಿವೃತ್ತ ನೌಕರರ ದಿನಾಚರಣೆ ಅಂಗವಾಗಿ ಡಿ. 15ರಂದು ಮುಂಜಾನೆ 10.30ಕ್ಕೆ ಶಿಗ್ಗಾಂವಿ ಗುರುಭವನದಲ್ಲಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸನ್ಮಾನ ಸಮಾರಂಭ ಸಿ.ವಿ. ಮತ್ತಿಗಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗುವುದು. ಶಾಸಕ ಬಸವರಾಜ ಎಸ್. ಬೊಮ್ಮಾಯಿ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಎಂ. ಬೇವಿನಮರದ ಆಗಮಿಸುವರು ಎಂದು ಕಾರ್ಯದರ್ಶಿ ವಿ.ಎಸ್.  ಶೇಗಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪರಿನಿರ್ವಾಣ ದಿನಾಚರಣೆ
ಶಿಗ್ಗಾಂವಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬೇಡ್ಕರರ ಪರಿನಿರ್ವಾಣ ದಿನಾಚರಣೆಯನ್ನು ದಲಿತ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಹರ ಗ್ರಾಮೀಣಾಭಿವೃದ್ಧಿ ವಿವಿಧೋದ್ಧೇಶ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ, ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಧ್ಯೇಯವನ್ನು ಅಳವಡಿಸಿಕೊಂಡು ದಲಿತರ ಅಭಿವೃದ್ಧಿಯೊಂದಿಗೆ ಸಮುದಾಯದ ಒಗ್ಗಟ್ಟಿಗೆ ಶ್ರಮಿಸಬೇಕು. ಶಿಗ್ಗಾಂವಿಯಲ್ಲಿ  ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕೆಂದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಕಾಳೆ, ದಲಿತ ಮುಖಂಡ ಶಿವಾನಂದ ಧಾರವಾಡ ಮಾತನಾಡಿ, ಅಂಬೇಡ್ಕರ್ ತತ್ವಾದೇಶ ಪಾಲಿಸುವುದರೊಂದಿಗೆ ಸಮಾಜವನ್ನು ಶುಚಿಗೊಳಿಸಬೇಕೆಂದು ಹೇಳಿದರು.
ಬಸಪ್ಪ ಚನ್ನದಾಸರ, ಕುರುಬ ಸಮಾಜದ ಮುಖಂಡ ಗದಿಗೆಪ್ಪ ಕೊಡ್ಲಿವಾಡ, ಅನೀಲ ಕಾಳೆ, ಗಂಗಾಧರ ಬನ್ನೂರ, ಶಿವಪುತ್ರಪ್ಪ ಚಲವಾದಿ, ರವಿ ಕಾಳೆ, ಫಕ್ಕೀರಪ್ಪ ಬನ್ನಿಮಟ್ಟಿ, ಮೈಲಾರೆಪ್ಪ ಡೊಳ್ಳೆಶ್ವರ, ಲಕ್ಷ್ಮಣ ಉಪ್ಪಾರ, ಬಸವರಾಜ ಬನ್ನೂರ ಇದ್ದರು. ಡಿಎಸ್‌ಎಸ್ ತಾಲೂಕು ಸಂಚಾಲಕ ಶೇಖಪ್ಪ ಭೀಮನವರ ನಿರೂಪಿಸಿದರು.
ಇಂದು ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮ
ರಾಣಿಬೆನ್ನೂರು: ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ಹಾಗೂ ಎಸ್‌ಜೆಎಂ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ಡಿ. 11ರಂದು ಮಧ್ಯಾಹ್ನ 12 ಗಂಟೆಗೆ ಕಾಲೇಜಿನ ಸಭಾಭವನದಲ್ಲಿ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ನಡೆಸಲಾಗುವುದು. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ತಾಲೂಕು ಸಹ ಕಾರ್ಯದರ್ಶಿ ಎಚ್.ಎ. ಮೀಶೇರ್ ಉದ್ಘಾಟಿಸುವರು. ಪ್ರಾಂಶುಪಾಲ ಎಚ್. ರಾಜು ಅಧ್ಯಕ್ಷರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಾನವ ಹಕ್ಕುಗಳ ಅಧ್ಯಕ್ಷ ಮೊಸೇಸ್ ಎಸ್. ಮರುಗವೇಲ್, ನೀಡ್ಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಎಫ್. ಅಕ್ಕಿ, ಎಸ್.ಡಿ. ಬಳಿಗಾರ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಖಾತ್ರಿ ಯೋಜನೆ ಸಭೆ ನಾಳೆ
ಶಿಗ್ಗಾಂವಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಚಟುವಟಿಕೆ ಚುರುಕುಗೊಳಿಸುವ ಉದ್ದೇಶದಿಂದ ಡಿ. 12ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾಯಕ ಬಂಧುಗಳಿಗೆ 1 ದಿನದ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ. ದೇವನಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಸಾಪ ಪರೀಕ್ಷೆಗೆ ಹಾಜರಾಗಲು ಸೂಚನೆ
ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ 2013-14ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿ. 27, 28 ಹಾಗೂ 29ರಂದು ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿವೆ. ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ. ಡಿ. 15ರ ನಂತರವೂ ಪ್ರವೇಶಪತ್ರ ತಲುಪದಿದ್ದರೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಅವರಲ್ಲಿ ವಿಚಾರಿಸಬಹುದು. ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು. ಪರೀಕ್ಷಾ ಕೇಂದ್ರದ ವಿಳಾಸವನ್ನು ದೂ. 08026623584 ಅಥವಾ ವೆಬ್‌ಸೈಟ್ ಢಿಢಿಢಿ.್ಞಛಡಛಠಛ.್ಝಟಿ ಮೂಲಕ ಪಡೆಯಬಹುದೆಂದು ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.
29ರಂದು ಸರ್ಕಾರಿ ನೌಕರರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ
ಶಿಗ್ಗಾಂವಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿಗ್ಗಾಂವಿ ತಾಲೂಕ ಘಟಕದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರಿಗಾಗಿ ಸಾಂಸ್ಕೃತಿಕ ಚಟುವಟಿಕೆ ಡಿ. 29ರಂದು ನಡೆಯಲಿದೆ. ಲಘು ಸಂಗೀತ, ಜಾನಪದ ಗೀತೆ, ಭಾವಗೀತೆ, ಚಲನಚಿತ್ರ ಗೀತೆಗಳು, ಆಶು ಭಾಷಣ ಸ್ಪರ್ಧೆಗಳು ಕಚೇರಿ ಮೈದಾನದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜರುಗಲಿವೆ.
ಪಟ್ಟಣದ ಹುಲಗೂರ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣಲ್ಲಿ ಜ. 4 ಹಾಗೂ 5ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಡಿ. 22ರ ಒಳಗಾಗಿ ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಡಿ. 30ರೊಳಗೆ ಹೆಸರು ನೋಂದಾಯಿಸಬೇಕು. ಒಬ್ಬ ಕ್ರೀಡಾಪಟು ಮೂರು ವೈಯುಕ್ತಿಕ ಚಟುವಟಿಕೆಯಲ್ಲಿ ಭಾಗವಹಿಸಬಹುದು. ಮಾಹಿತಿಗೆ, ಪ್ರಕಾಶ ಔಂಧಕರ ಅಧ್ಯಕ್ಷರು, ಕ್ರೀಡಾ ಸಮಿತಿ (ಮೊ. 9880476250) ಅವರನ್ನು ಸಂಪರ್ಕಿಸುವಂತೆ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಡಿ. ಯತ್ನಳ್ಳಿ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಹಿರೇಕೆರೂರು: ಉತ್ತರ ಭಾರತದ 4 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಆರ್. ಅಂಗಡಿ ಹೇಳಿದರು.
ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ  ವಿಜಯೋತ್ಸವ ಆಚರಿಸಿ, ದೇಶದ ಭವಿಷ್ಯಕ್ಕಾಗಿ ಮೋದಿ ಪ್ರಧಾನಿಯಾಗುವುದು ಅನಿವಾರ್ಯವಾಗಿದೆ. ವಾಜಪೇಯಿ ಸರ್ಕಾರದ ಸಾಧನೆಗಳು, ಗುಜರಾತ್‌ನ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಜಿಪಂ ಸದಸ್ಯೆ ಬಸಮ್ಮ ಅಬಲೂರು ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಮಾಗನೂರ, ಕಾರ್ಯಕರ್ತರಾದ ಪರಮೇಶಯ್ಯ ಹಿರೇಮಠ, ಶಂಕ್ರಗೌಡ ಪಾಟೀಲ, ರುದ್ರೇಶ ಕೋಣನವರ, ನಾಗಣ್ಣ ಯಡಂಗಳ್ಳಿ, ನಗರ ಘಟಕದ ಅಧ್ಯಕ್ಷೆ ನಿಂಗಮ್ಮ ಅಂಗಡಿ,  ಕಂಠಾಧರ ಅಂಗಡಿ, ಶಿವಣ್ಣ ಗುತ್ತಲ, ಬಸಣ್ಣ ಮಾಳಿ, ಜಗದೇವಪ್ಪ ಗುತ್ತಲ, ಮಂಜುನಾಥ ಗೋಣಿಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement