ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾಡಿರೇ ರಾಗಗಳ ತೂಗಿರೇ ದೀಪಗಳ

Mainashree
Updated On : 11 Dec 2013, 11:46 am

ಹಾವೇರಿ: ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಡಿರೇ ರಾಗಗಳ ತೂಗಿರೇ ದೀಪಗಳ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು.
ಕಿನ್ನರಿಜೋಗಿ ಜಾನಪದ ಕಲಾವಿದರಾದ ವಿದ್ಯಾಶ್ರೀ ಎನ್. ಚೌಹಾಣ್, ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ನಾಗರಾಜ ಜೋಗಿ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಕಿನ್ನರಿ ಜೋಗಿ ಕಲಾವಿದ ಗಣೇಶ ಎನ್. ಚೌಹಾಣ್ ಕಾರ್ಯಕ್ರಮ ನಡೆಸಿಕೊಟ್ಟರು.
ಗಣೇಶ ಎನ್. ಚೌಹಾಣ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮತ್ತು ಮಾಧ್ಯಮದ ಪ್ರಭಾವದಿಂದ ಜನಪದ ಕಲೆ ನಶಿಸಿ ಹೋಗುತ್ತಿದೆ. ಜಾನಪದದ ಬಗ್ಗೆ ಪ್ರೌಢ ಮತ್ತು ಕಾಲೇಜಿನ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳು ಮತ್ತು ಯುವಕರು ಜಾನಪದ ಕಲಿಯುವುದರ ಜೊತೆಗೆ ಜನಪದ ಕಲೆ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿ.ಆರ್. ಗೋಖಲೆ ಮಾತನಾಡಿ, ಕಿನ್ನರಿ ಜೋಗಿ ಅಪರೂಪದ ಕಲೆಯಾಗಿದ್ದು, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಜಾನಪದ ಕಲೆಗಳು ಉಳಿಯಲು ಸಾಧ್ಯ ಎಂದರು. ಮುಖ್ಯಾಧ್ಯಾಪಕಿ ಎ.ಆರ್. ಗೋಖಲೆ, ಶಿಕ್ಷಕಿ ಎಸ್.ಎಸ್. ಘಾಳಪೂಜಿ, ಶಿಕ್ಷಕರಾದ ಪಿ.ಎಸ್. ಅಂಗಡಿ, ವಿನಾಯಕ ಖಾಂಡಕೆ, ಯಶೋದಾ ವರಖೇಡಿ, ಎ.ಆರ್. ಸದೈಣ್ಣನವರ, ಎ.ಬಿ. ಹಾದಿಮನಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement