ಪಂಚಮಸಾಲಿ ಮಠ ಮಾದರಿ: ದಿಂಡೂರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 11
ಪಂಚಮಸಾಲಿ ಮಠ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಛೀಜಿತವಾಗದೆ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಪರ್ೀಣ, ಕೃಷಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿದೆ. ಮಠವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಲಾಗುವುದು ಎಂದು ವೀರಶೈವ ಪಂಚಮಸಾಲಿ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಹೇಳಿದರು.
ತಾಲೂಕಿನ ರಟ್ಟಿಹಳ್ಳಿಯಲ್ಲಿ ಹರಿಹರ ವೀರಶೈವ ಪಂಚಮಸಾಲಿ ಗುರಪೀಠ ಹರಿಹರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ಸ್ಥಾಪನೆಯ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಗುರುಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಸಮಾಜದ ರಾಜಕೀಯ ಅಥವಾ ಪ್ರಭಾವಿ ವ್ಯಕ್ತಿಗಳ ಕೇಂದ್ರಗಳಾಗದೆ ಎಲ್ಲರ ಸ್ವತ್ತಾಗಿದ್ದಾಗ ಮಾತ್ರ ನಿಜವಾದ ಸಮಾಜ ಸೇವೆ ಆಗುವುದು. ಭಕ್ತರ ಬೇಡಿಕೆಗೆ ಮಣಿದು ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಬಡವ, ಬಲ್ಲಿದರೆನ್ನದೆ ತಿಳಿದಷ್ಟು ಸಹಾಯ ಮಾಡಿದಲ್ಲಿ ಏಕ ಮನಸ್ಸಿನಿಂದ ಸ್ವೀಕರಿಸಲಾಗುವುದು. ಯಾವುದೇ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳ ಹಣದಿಂದ ಮಠ ನಿರ್ಮಾಣವಾಗಬಾರದು. ಭಕ್ತರಿಂದಲೇ ನಿಧಿ ಸಂಗ್ರಹಣೆ ಆಗಬೇಕು ಎಂದರು.
ಜಿಲ್ಲಾಧ್ಯಕ್ಷ ಎಸ್.ಆರ್. ಅಂಗಡಿ, ತಾಲೂಕಾಧ್ಯಕ್ಷ ರುದ್ರೇಶ ಹುಲ್ಮನಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ನೀಲಮ್ಮ ಹೊಸಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸಮ್ಮ ಅಬಲೂರ, ಮುಖಂಡರಾದ ನಿಂಗಪ್ಪ ಚಳಗೇರಿ, ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ಎಸ್.ಬಿ. ಪಾಟೀಲ, ಮಾಲತೇಶ ಬೆಳಕೇರಿ, ವೀರನಗೌಡ ಪ್ಯಾಟಿಗೌಡ್ರ, ವೀರಪ್ಪ ಪುರದ ಇದ್ದರು.