ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿವಿಗೆ ಒಡೆಯರ್ ಹೆಸರಿಡಿ

Lingaraj Badiger
Updated On : 12 Dec 2013, 11:31 am

ಶಿಗ್ಗಾಂವಿ: ಹಳೆ ಮೈಸೂರು ಪ್ರಾಂತ್ಯದ ನಾಲ್ವಡಿ ಕೃಷ್ಣ ರಾಜರಿಂದ ಮಂಗಳವಾರ ನಿಧನರಾದ ಯದು ವಂಶದ ಕಡೆಯ ಕುಡಿ ಶ್ರೀಕಂಠದತ್ತ ವಡೆಯರ್ ಅವಧಿಯ ಕೊಡುಗೆಗಳು, ಅವರ ಉದಾರಿತನವನ್ನು ನಾವೆಲ್ಲ ಕೊಂಡಾಡುತ್ತೇವೆ. ಆದರೆ ಅವರಿಗೆ ನಿಜವಾದ ಗೌರವ ತೋರಲು ಸರ್ಕಾರ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮೈಸೂರು ಮಹಾರಾಜ ವಿವಿ ಎಂದು ಪುನರ್ ನಾಮಕರಣ ಮಾಡಬೇಕು ಎಂದು ಇಲ್ಲಿಯ ಹರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿದ್ದಾರೆ. ರಾಜ್ಯ ವಂಶಸ್ಥರ ಆಡಳಿತಾನಂತರ ಪ್ರಜಾಪ್ರಭುತ್ವ ಅಡಿಯಲ್ಲಿ ಆಡಳಿತ ಮಾಡಿದ ಹಾಗೂ ಮಾಡುತ್ತಿರುವ ಸರ್ಕಾರಗಳು ಈ ಮಹನೀಯರ ಇತಿಹಾಸ ಹಾಗೂ ಅವರ ಕೊಡುಗೆಗಳನ್ನು ಸಮಾಜಕ್ಕೆ ತೋರಿಸಲು ನಿರ್ಲಕ್ಷ್ಯ ವಹಿಸಿರುವುದು ದುರ್ದೈವದ ಸಂಗತಿ. ಕರ್ನಾಟಕ ವಿವಿಗೆ ಮೈಸೂರು ಮಹಾರಾಜ ವಿಶ್ವ ವಿದ್ಯಾಲಯ ಎಂಬ ಹೆಸರಿಡಬೇಕು ಎಂದು ಮಣ್ಣಣ್ಣವರ, ಪ್ರಕಾಶ ಹಾದಿಮನಿ, ಗದಿಗೆಪ್ಪ ಕೊಡ್ಲಿವಾಡ, ಅಶೋಕ ಕಾಳೆ, ಪ್ರಶಾಂತ ದುಂಡಿಗೌಡರ, ನಿಂಭನಗೌಡ ಗುಡ್ಡನಗೌಡ್ರ, ನಾಗಪ್ಪ ತುಪ್ಪದ, ಸುಭಾಸ್ ಮಾದರ, ದುರಗಪ್ಪ ವಡ್ಡರ, ಆನಂದ ಸುಬೇದಾರ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಜ. 5ರಂದು ಮಡಿವಾಳರ ಜಾಗೃತಿ ಸಮಾವೇಶ
ಹಾವೇರಿ: ಜ. 5ರಂದು ಬೆಂಗಳೂರನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಸಮಾಜದ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಗುತ್ತೆಪ್ಪ ಮಡಿವಾಳರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ಹಾಗೂ ಹೀನ ಕಾಯಕದಲ್ಲಿ ತೊಡಗಿರುವ ಮಡಿವಾಳ ಜನಾಂಗವನ್ನು ರಾಷ್ಟ್ರದ ಇತರೆ 17 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ರಾಜ್ಯದಲ್ಲಿಯೂ ಮೈಸೂರು ವಿವಿಯ ಪ್ರೊ೤ ಅನ್ನಪೂರ್ಮಮ್ಮ ಅವರ ವರದಿಯ ಅನುಸಾರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು. ಕುಲಗುರು ಮಡಿವಾಳ ಮಾಚಿದೇವರ ಜನ್ಮದಿನವನ್ನು ಸರ್ಕಾರ 'ಮಾಚಿದೇವ ಜಯಂತಿ' ಎಂದು ಘೋಷಿಸಬೇಕು. ಮಾಚಿದೇವರ ಜನ್ಮಸ್ಥಳವಾದ ವಿಜಾಪುರ ಜಿಲ್ಲೆ ಸಿಂಧಗಿ ತಾಲೂಕು ದೇವರಹಿಪ್ಪರಗಿಯನ್ನು ಅಭಿವೃದ್ಧಿಪಡಿಸಿ ಜನ್ಮಸ್ಥಳ ನಿರ್ವಹಣೆಗೆ ಪ್ರತ್ಯೇಕವಾಗಿ ಮಾಚಿದೇವ ಪ್ರಾಧಿಕಾರ ರಚನೆ, ಮಾಚಿದೇವರ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಲಾಗುವುದು. ಸಮಾವೇಶದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದರು. ಸಂಘದ ಕಾರ್ಯದರ್ಶಿ ಕೋಟೆಪ್ಪ ಮಡಿವಾಳರ, ಖಜಾಂಚಿ ಬಸವರಾಜ ಮಡಿವಾಳರ, ನಿರ್ದೇಶಕ ಈರಣ್ಣ ದೊಡ್ಡಮನಿ, ಸುರೇಶ ಮಡಿವಾಳರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement