ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

16ರಂದು ಕಾರ್ಯಕ್ರಮ

Lingaraj Badiger
Updated On : 13 Dec 2013, 10:51 am

ರಾಣಿಬೆನ್ನೂರು: ನಗರದ ಗಂಗಾಪುರ ರಸ್ತೆಯಲ್ಲಿರುವ ಸಂಗಮೇಶ್ವರಸ್ವಾಮಿ ಕರ್ತೃ ಗದ್ದುಗೆ ಮಠ ಮತ್ತು ಗುರು ಕೊಟ್ಟೂರು ಬಸವೇಶ್ವರ ಸ್ವಾಮಿ ಮಠದಲ್ಲಿ ತಾಲೂಕಿನ ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಡಿ. 16ರಂದು ಸಂಜೆ 6.30ಕ್ಕೆ ಕಾರ್ತಿಕೋತ್ಸವ, ಗುರು ಕೊಟ್ಟೂರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಸಂಗಮೇಶ್ವರ ಸ್ವಾಮಿಗೆ ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಪಾಲಕಿ ಉತ್ಸವ ನಡೆಸಲಾಗುವುದೆಂದು ಪ್ರಕಟಣೆ ತಿಳಿಸಿದೆ.
17ರಂದು ಕಾರ್ತಿಕೋತ್ಸವ
ರಾಣಿಬೆನ್ನೂರು: ಇಲ್ಲಿನ ವಾಗೀಶ ನಗರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಸಮಿತಿಯಿಂದ ಡಿ. 17ರಂದು ಮುಂಜಾನೆ 6ರಿಂದ ಹೊನ್ನಾಳಿಯ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಕಾರ್ತಿಕೋತ್ಸವ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement