ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಲಬೆರಕೆ ಹಾಲಿಗೆ ಕನ್ನಡಿ ಹಿಡಿದ ಕನ್ನಡಪ್ರಭ

Lingaraj Badiger
Updated On : 13 Dec 2013, 10:57 am

ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಮಾಡುತ್ತಿರುವ ಕುರಿತು ಕನ್ನಡಪ್ರಭ ಬೆಳಕು ಚೆಲ್ಲಿ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿದೆ. ರೈತರಿಂದ ಹಾಲನ್ನೇ ಖರೀದಿಸದೇ ಮಾರುಕಟ್ಟೆಗೆ ಹಾಲು ಪೂರೈಕೆ ಮಾಡುವಾಗಲೇ ಅನುಮಾನವಿತ್ತು. ಅದೀಗ ನಿಜವಾಗಿದೆ. ಕಲಬೆರಕೆ ಮಾಡುವ ಖಾಸಗಿ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಂಥ ಬ್ರ್ಯಾಂಡ್‌ಗಳ ಹಾಲನ್ನು ನಿಷೇಧಿಸಬೇಕು. ಸರ್ಕಾರಿ ಸ್ವಾಮ್ಯದ ಕಂಪನಿ ಹೊರತುಪಡಿಸಿ ಉಳಿದವುಗಳು ಹಾಲು ಮಾರಾಟ ಮಾಡುವುದನ್ನು ಬಂದ್ ಮಾಡಬೇಕು.
- ವೈ.ಐ. ಮಡಿವಾಳರ, ಹಾವೇರಿ
ಕಲಬೆರಕೆ ಹಾಲಿನ ಬಗ್ಗೆ ವರದಿ ಪ್ರಕಟಿಸಿ ಕನ್ನಡಪ್ರಭ ನಿಜವಾಗಿಯೂ ಕಾಳಜಿ ಮೆರೆದಿದೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ಪತ್ರಿಕೆಗಿರುವ ಕಳಕಳಿ ಮೆಚ್ಚುವಂಥದ್ದು. ಹಾಲು ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂಬುದನ್ನು ತಿಳಿದು ಸಿಕ್ಕ ಬ್ರ್ಯಾಂಡ್‌ನ ಹಾಲು ಬಳಸುತ್ತಿದ್ದೆವು. ರಾಸಾಯನಿಕ ಬೆರಕೆ ಮಾಡುವುದು ಗೊತ್ತಿದ್ದರೂ ಸರ್ಕಾರ ಅವುಗಳ ಮೇಲೆ ಕ್ರಮ ಕೈಗೊಳ್ಳದಿರುವುದು ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಗಮನವಿಲ್ಲ ಎಂಬುದು ತಿಳಿದಂತಾಗಿದೆ. ಕಳಪೆ ಹಾಲನ್ನು ಜನರೇ ಬಹಿಷ್ಕರಿಸಬೇಕು.
- ಜೆ.ಬಿ. ಮಂಡಕ್ಕಿ, ಹಾವೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement