ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಖೋಖೋ: ವಿವಿ ತಂಡಕ್ಕೆ ಹರ್ಷ ಕುಮಾರ ಆಯ್ಕೆ

Lingaraj Badiger
Updated On : 13 Dec 2013, 10:59 am

ಹಾವೇರಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿ ಹರ್ಷಕುಮಾರ ಎಂ.ಎಸ್. ಪ್ರಸಕ್ತ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಖೋಖೋ ತಂಡಕ್ಕೆ ಹಾಗೂ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಜರುಗುವ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋಖೋ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಪ್ರಾಚಾರ್ಯ ಜೆ.ಸಿ. ಹಾದಿಮನಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಜಿ. ಕಲ್ಲೇಶಪ್ಪ ಹಾಗೂ ಸಿಬ್ಬಂದಿ ಶುಭ ಕೋರಿದ್ದಾರೆ.
ನಾಳೆಯಿಂದ ವಿದ್ಯುತ್ತಿಲ್ಲ
ಹಾವೇರಿ: ಗುತ್ತಲದಿಂದ ಹೊರಡುವ 33 ಕೆವಿ ಹೊಸರಿತ್ತಿ ಮತ್ತು ನೀರಲಗಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇದ್ದು, ಡಿ. 14ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹಂದಿಗನೂರ, ಕೋಣನತಂಬಿಗಿ, ಮಣ್ಣೂರ, ಮೇಲ್ಮುರಿ, ಬೈಲಮಾದಾಪುರ, ಹೊಸರಿತ್ತಿ, ಕನವಳ್ಳಿ, ಯಲಗಚ್ಚ, ಕಿತ್ತೂರ, ನೀರಲಗಿ, ಬೇಲವಿಗಿ, ಗಳಗನಾಥ, ತೆರೆದಳ್ಳಿ, ಮೇವುಂಡಿ ನೀರು ಸರಬರಾಜು, ಕೆರೆಕೊಪ್ಪಾ, ಗೂಡೂರ, ಗುಡಿಸಲಕೊಪ್ಪಾ, ಹಾಲಗಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗುತ್ತಲದಿಂದ ಹೊರಡುವ 11 ಕೆವಿ ಗುತ್ತಲ, ಕೂರಗುಂದ, ಕಂಚಾರಗಟ್ಟಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ. 15ರಂದು ಬೆಳಗ್ಗೆ 8ರಿಂದ ಸಂಜೆ 5ರ ತನಕ ವಿದ್ಯುತ್ ವ್ಯತ್ಯಯವಾಗುವುದು. ಗುತ್ತಲ, ಕುರಗುಂದ, ಭರಡಿ, ತಿಮ್ಮಾಪುರ, ಕಂಚಾರಗಟ್ಟಿ, ಹರಳಳ್ಳಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಂತಿಸಿದ್ದಾರೆ.
ಮುದ್ರಾ ವಿಜ್ಞಾನ ಶಿಬಿರ
ಹಾವೇರಿ: ರೋಟರಿ ಕ್ಲಬ್ ಸಹಯೋಗದಲ್ಲಿ ರಾಜೇಂದ್ರನಗರದ ರೋಟರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜೀವನಧಾರಾ ಆರೋಗ್ಯ ಕೇಂದ್ರದ ವತಿಯಿಂದ ಮುದ್ರಾ ವಿಜ್ಞಾನ ಶಿಬಿರ ಸಂಪನ್ನಗೊಂಡಿತು. ಸ್ವಾಮಿ ನೀರವ್ ಸಂಕೇತ್ ಧರ್ಮಸ್ಥಳ ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಆಹಾರಕ್ರಮ, ವ್ಯಕ್ತಿತ್ವ ವಿಕಸನದ ಕುರಿತು ಮಾರ್ಗದರ್ಶನ, ಕೊನೆಯ ದಿನ ಬ್ರಹ್ಮೋಪದೇಶ ಪ್ರವಚನ ನೀಡಿದರು. ಶಿಬಿರದ ಸಂಘಟಕರಾದ ಶಂಕರಯ್ಯ ಹಿರೇಮಠ, ಕಮಲಾಕರ ಹೆಗಡೆ, ಶಿವಯೋಗಿ ಬಣಕಾರ, ವಿಮಲಾ ಹೆಗಡೆ, ಶಿಕ್ಷಕಿ ಸರಸ್ವತಿ ಹೆಗಡೆ ಇದ್ದರು.
ವಿದ್ಯಾರ್ಥಿಗಳಿಗೆ ನೆರವು
ಹಾವೇರಿ: ತಾಲೂಕಿನ ಗುತ್ತಲದ ಭೀಮಕ್ಕ ಶಂಕರಪ್ಪ ಕುಲಕರ್ಣಿ ಸೇವಾ ಪ್ರತಿಷ್ಠಾನ ಪಿಯುಸಿ ನಂತರ ಓದುತ್ತಿರುವ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಪಿಯುಸಿ ನಂತರದ ಕೋರ್ಸ್ ಮಾಡುತ್ತಿರುವ ರಾಜ್ಯದ ಪ್ರತಿಭಾವಂತ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಲಿಂಗರಾಜ ಕುಲಕರ್ಣಿ ಸ್ಮಾರಕ ಸಹಾಯಧನ ನೀಡುತ್ತಿದೆ. ಅರ್ಜಿ ಸಲ್ಲಿಸಲು ಡಿ. 25 ಕೊನೆ ದಿನ. ಅರ್ಜಿ ನಮೂನೆ, ಮಾಹಿತಿಗಾಗಿ ಮೊ. 9448779434 ಅಥವಾ 9008385385 ಸಂಪರ್ಕಿಸಿ.

ಉಚಿತ ಕಂಪ್ಯೂಟರ್ ತರಬೇತಿಗೆ ಆಹ್ವಾನ
ಹಾವೇರಿ: ಜಿಲ್ಲಾಡಳಿತ ಭವನ ಸಂಕೀರ್ಣದ ಹಿಂಭಾಗದಲ್ಲಿರುವ ವಿಜಯಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ 18ರಿಂದ 35 ವಯೋವಾನದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ 30 ದಿನಗಳ ಕಂಪ್ಯೂಟರ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಡಿ. 16ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಡಿ. 16ರೊಳಗಾಗಿ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. 08375-249160 ಅಥವಾ ಮೊ. 8762721574 ಸಂಪರ್ಕಿಸುವಂತೆ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement