ವಿಎಸ್ಸೆಸ್ ಮೂಲಕ ಬೆಳೆ ಪರಿಹಾರ ನೀಡಿ
ಹಾನಗಲ್ಲ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕುಗಳ ಮೂಲಕ ಬೆಳೆ ವಿಮೆ ಕಂತು ತುಂಬಿಸಿಕೊಂಡು, ಪರಿಹಾರ ವಿತರಿಸುವುದು ಸಂಪ್ರದಾಯ. ಕೆಸಿಸಿ ಬ್ಯಾಂಕ್ ತನ್ನ ಲಾಭಕ್ಕಾಗಿ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ಕೆಸಿಸಿ ಬ್ಯಾಂಕ್ ಶಾಖೆ ಎದುರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ರೈತ ಸಮುದಾಯ ಉಳಿಯಬೇಕಾದರೆ ವಿಎಸ್ಸೆಸ್ ಬ್ಯಾಂಕ್ಗಳು ಆರ್ಥಿಕವಾಗಿ ಸದೃಢಗೊಳ್ಳಬೇಕು. ರೈತರೆಲ್ಲರಿಗೆ ಹೊಸ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿದರೆ, ಶೂನ್ಯ ಶಿಲ್ಕಿನ ಖಾತೆ ತೆರೆಯಿಸಿಕೊಳ್ಳಲಿ. ಅನವಶ್ಯಕವಾಗಿ ರು. 500 ತೊಡಗಿಸುವಂತೆ ಆದೇಶಿಸಿರುವುದು ಬ್ಯಾಂಕಿಗೆ ಬಂಡವಾಳ ಕ್ರೋಡೀಕರಿಸುವ ವಾಮಮಾರ್ಗ. ಕೆಸಿಸಿ ಬ್ಯಾಂಕ್ ಇದೇ ಧೋರಣೆ ಮುಂದುವರಿಸಿದರೆ, ಮುಂದೆ ಬೆಳೆವಿಮೆ ಕಂತನ್ನೂ ನಾವೇ ತುಂಬಿಸಿಕೊಳ್ಳಬೇಕಾಗುತ್ತದೆ. ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಸಿದರು.
ಸಮ್ಮಸಗಿ ವಿಎಸ್ಸೆಸ್ ಬ್ಯಾಂಕ್ ಅಧ್ಯಕ್ಷ ಜಿ.ಎಸ್. ದೇಶಪಾಂಡೆ, ಅಕ್ಕಿಆಲೂರ ಬ್ಯಾಂಕ್ನ ಅಧ್ಯಕ್ಷ ಚಂದ್ರಗೌಡ ಪಾಟೀಲ, ಗ್ರಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಡಿ.ಸಿ. ಪಾಟೀಲ, ಸಿದ್ದಣ್ಣ ಕನವಳ್ಳಿ, ಸುರೇಶ ದೊಡ್ಡಕುರುಬರ, ರೈತ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಅಕ್ಕಿವಳ್ಳಿ, ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ, ಬಸವರಾಜ ಬೈಲಪ್ಪನವರ ಇದ್ದರು.