12 ಜೋಡಿಗಳು ಗೃಹಸ್ಥಾಶ್ರಮಕ್ಕೆ
ರಾಣಿಬೆನ್ನೂರು: ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಬೇಲೂರು ಹಿರೇಮಠದ ಶಿವಯೋಗಿ ಹಾಲಸ್ವಾಮಿಗಳು ನುಡಿದರು. ತಾಲೂಕಿನ ಬೇಲೂರು ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಹಾಲಸ್ವಾಮಿ ಸೇವಾ ಸಮಿತಿ ಮತ್ತು ಹಿರೇಮಠದಿಂದ ಏರ್ಪಡಿಸಿದ್ದ 14ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಂದಿಪುರದ ಮಹೇಶ್ವರ ಸ್ವಾಮಿಗಳು, ಹಿರೇಹಡಗಲಿಯ ಹಾಲವೀರಪ್ಪಜ್ಜ ಸ್ವಾಮೀಜಿ, ತಾಪಂ ಸದಸ್ಯ ಹಾಲಪ್ಪ ಲಮಾಣಿ ಇದ್ದರು. ಹಾಲೇಶಪ್ಪ ಭಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಲೋಕ ಶಿಕ್ಷಣ ಸಮಿತಿಯ ಸಂಯೋಜಕ ಎಚ್.ಆರ್. ಭಾರ್ಕಿ ನಿರೂಪಿಸಿದರು.