ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಐಸಾನ್ ಧೂಮಕೇತು ಕುರಿತು ಶೈಕ್ಷಣಿಕ ಶಿಬಿರ

Mainashree
Updated On : 14 Dec 2013, 10:20 am

ಹಾವೇರಿ: ಐಸಾನ್ ಧೂಮಕೇತು ಕುರಿತಾದ ಶೈಕ್ಷಣಿಕ ಶಿಬಿರವನು ಬಿಜೆವಿಎಸ್ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಿ. 16ರಂದು ಬೆಳಗ್ಗೆ 9.30ಕ್ಕೆ ನಗರದ ಶಿವಲಿಂಗೇಶ್ವರ ಡಿ.ಇಡಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಶಿಬಿರದಲ್ಲಿ ವಿಜ್ಞಾನ ಶಿಕ್ಷಕರು, ಪಿಯು ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಶಿಬಿರ ಉದ್ಘಾಟಿಸುವರು. ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆವಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಫ್.ಸಿ. ಚೇಗರಡ್ಡಿ, ಡಿಡಿಪಿಐ ಎಸ್.ಬಿ. ಕೊಡ್ಲಿ, ಡಿಡಿಪಿಯು ಎಚ್.ಎಸ್. ಚಿನಿಕಟ್ಟಿ, ವಿಷಯ ಪರಿವೀಕ್ಷಕ ಆರ್.ಎನ್. ಹುರುಳಿ, ಎಂ.ಎ. ಅಲಿ ಪಾಲ್ಗೊಳ್ಳಲಿದ್ದಾರೆ. ಪಿ.ಬಿ. ಮುದ್ದಿ, ಜಿ.ಎಸ್. ಹತ್ತಿಮತ್ತೂರ ಸಂಪನ್ಮೂಲ ವ್ಯಕ್ತಿಗಳು. ಹುಕ್ಕೇರಿಮಠದ ಆಡಳಿತಾಧಿಕಾರಿ ಬಿ. ಬಸವರಾಜ, ಸಾಹಿತಿ ಸತೀಶ ಕುಲಕರ್ಣಿ, ವಿ.ಎಂ. ಪತ್ರಿ, ಎಸ್.ಬಿ. ಮಾಸಲವಾಡ, ಕೆ.ಆರ್. ನಾಸಿಪುರ, ಎಸ್.ಎನ್. ದೊಡ್ಡಗೌಡರ, ಆರ್.ಎಸ್. ಪಾಟೀಲ ಆಗಮಿಸಲಿದ್ದಾರೆ ಎಂದು ಬಿಜೆವಿಎಸ್ ರಾಜ್ಯ ಘಟಕದ ಉಪಾಧ್ಯಕ್ಷೆ ರೇಣುಕಾ ಗುಡಿಮನಿ ಮತ್ತು ಕರಾವಿಪ ಜಿಲ್ಲಾ ಘಟಕದ ಕಾರ್ಯದರ್ಶಿ ಕಬ್ಬಿಕಂತಿಮಠ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement