ಕೌಟುಂಬಿಕ ದೌರ್ಜನ್ಯ: 18ರಿಂದ ಕಾರ್ಯಾಗಾರ
ಹಾವೇರಿ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ-2005 ನಿಯಮ 2006ರಡಿ ಜಿಲ್ಲಾ ಮಟ್ಟದ ಕಾರ್ಯಾಗಾರ ಡಿ. 18 ಹಾಗೂ 19ರಂದು ಜಿಪಂ ಸಭಾಭವನದಲ್ಲಿ ಜರುಗಲಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಎಸ್. ಸಾವಿತ್ರಿ ವಿನಾಯಕ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಪಿ ಎನ್. ಶಶಿಕುಮಾರ, ಜಿಪಂ ಸಿಇಒ ಕೆ.ಬಿ. ಅಂಜನಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎನ್.ಎಸ್. ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪೂಜಾರ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್. ಹಿರೇತನದ ಪಾಲ್ಗೊಳ್ಳುವರು. ಡಿ. 18ರಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ರೆಡ್ಡಿ ಎಂ.ವಿ., ಕಿರಿಯ ಸಿವಿಲ್ ನ್ಯಾಯಾಧೀಶ ಎನ್. ಶ್ರೀಪಾದ, ಎಸ್.ಬಿ. ಕೆಂಬಾವಿ, ನ್ಯಾಯವಾದಿಗಳಾದ ಚೇತನಾ ಜಿ.ಎಸ್., ರಿಹಾನಾ ಚನ್ನಪಟ್ಟಣ ಉಪನ್ಯಾಸ ನೀಡಲಿದ್ದಾರೆ. ಡಿ. 19ರಂದು ನ್ಯಾಯವಾದಿಗಳಾದ ದಾವಣಗೆರೆ ದಾದಾಪೀರ, ಧಾರವಾಡದ ವಿ.ಜಿ. ಭಟ್, ಪ್ರಫುಲ್ ನಾಯಕ್ ಉಪನ್ಯಾಸ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗಿ ತಿಳಿಸಿದ್ದಾರೆ.