ಗೀತಾ ಜಯಂತಿ ಪ್ರಯುಕ್ತ ಲಕ್ಷ ಕುಂಕುಮಾರ್ಚನೆ
ಹಾನಗಲ್ಲ: ಪಟ್ಟಣದ ಶ್ರೀ ದತ್ತ ದೇವಸ್ಥಾನದಲ್ಲಿ ದಿವ್ಯಜೀವನ ಸಂಘದಿಂದ ಗೀತಾ ಜಯಂತಿ ಅಂಗವಾಗಿ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ನಡೆಯಿತು. ದಿವ್ಯಜೀವನ ಸಂಘದ ಅಧ್ಯಕ್ಷ ಪಂ. ಗಂಗಾಧರ ಶಾಸ್ತ್ರೀ ಕಾಶೀಕರ ನೇತೃತ್ವದಲ್ಲಿ ಲಲಿತಾ ಸಹಸ್ರನಾಮಾವಳಿ ಪಠಣದ ಮೂಲಕ ಸುವಾಸಿನಿಯರಿಂದ ಲಕ್ಷ ಕುಂಕುಮಾರ್ಚನೆ ನಡೆಯಿತು.
ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಶಾಂಭವಿ ಪಾಟೀಲ, ಶರ್ಮದಾ ಕಾಶೀಕರ, ಶ್ರೇಯಸ್ ಪಾಟೀಲ, ಲಕ್ಷ್ಮೀ ಪೂಜಾರ, ಸಚ್ಚಿದಾನಂದ ಕಾಶೀಕರ, ಸಂಪದಾ ಪೂಜಾರ, ವರ್ಷಿಣಿ ಕರಗುದರಿ, ಶ್ರೀಶ ಪೋತದಾರ, ಮಹಾಲಸಾ ಸರಾಫ, ಭುವನ ಕರಗುದರಿ, ಮೈತ್ರಿ ಚಿನ್ನಮುಳಗುಂದ, ವೇದಶ್ರೀ ಕರಗುದರಿ, ಶ್ರೇಯು ಪೂಜಾರ ಮುಂತಾದವರು ಪಾಲ್ಗೊಂಡಿದ್ದರು. ವಿಶ್ರಾಂತ ಶಿಕ್ಷಕ ಜಿ.ಆರ್. ಪೋತಾರ ಅಧ್ಯಕ್ಷತೆ ವಹಿಸಿದ್ದರು. ದತ್ತ ದೇವಸ್ಥಾನದ ಅರ್ಚಕ ಮುಕುಂದ ಭಟ್ ಕಾಗಿನೆಲ್ಲಿ, ಘನಶ್ಯಾಮ ದೇಶಪಾಂಡೆ, ಆದಿತ್ಯಭಾರತಿ ದೇಶಪಾಂಡೆ ಇದ್ದರು.