ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಗೆ ಆಯ್ಕೆ
ರಾಣಿಬೆನ್ನೂರು: ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಎಪಿಎಂಸಿ ಉಪಸಮಿತಿ ಅಧ್ಯಕ್ಷರಾಗಿ ಜಿ.ಜಿ. ಹೊಟ್ಟಿಗೌಡ್ರ ನೇಮಕಗೊಂಡಿದ್ದಾರೆ. ರಾಜಶೇಖರ ವಾಲಿ, ಹಾವೇರಿಯ ಪ್ರಕಾಶ ವಾಲಿಶೆಟ್ಟರ, ಬೈಲಹೊಂಗಲದ ರಾಜಣ್ಣ ಸಂಗೊಳ್ಳಿ, ಕಡೂರಿನ ಬಿ.ಎಸ್. ಸತೀಶ, ಗದುಗಿನ ಬಾಲಚಂದ್ರ ಭರಮಗೌಡ್ರ, ಕೊಪ್ಪಳದ ಶರಣಬಸಯ್ಯ ಕರದಳ್ಳಿಮಠ, ರಾಣಿಬೆನ್ನೂರಿನ ಜಿ.ಬಿ. ಜಂಬಗಿ, ಗೋಕಾಕದ ಮಹಾಂತೇಶ ತೌಂಶಿ, ಧಾರವಾಡದ ಎಸ್.ಎಸ್. ದೊಡ್ಮನಿ, ಸಿ.ಎಸ್. ಕರಡ್ಡಿ ಸದಸ್ಯರೆಂದು ಗೌರವ ಕಾರ್ಯದರ್ಶಿ ಶಿದ್ದೇಶ್ವರ ಕಮ್ಮಾರ ತಿಳಿಸಿದ್ದಾರೆ.
ರಾಣಿಬೆನ್ನೂರು: ರಿಯಾಯ್ತಿ ದರದಲ್ಲಿ ಕೃಷಿ ಸಲಕರಣೆ ಲಭ್ಯ
ರಾಣಿಬೆನ್ನೂರು: ತಾಲೂಕಿನ ಕುಪ್ಪೆಲೂರು, ಮೇಡ್ಲೆರಿ ಗ್ರಾಮ ಹಾಗೂ ಹಲಗೇರಿ ರಸ್ತೆಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಸಲಕರಣೆಗಳು, ಕೀಟನಾಶಕ, ಭೂಮಿಯ ಸಾರವರ್ಧಕವನ್ನು ಶೇ. 50 ಸಹಾಯಧನದಲ್ಲಿ ನೀಡುವುದಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ ನಾಗನಗೌಡ ರೆಡ್ಡಿ ತಿಳಿಸಿದ್ದಾರೆ.