ಶಾಸ್ತ್ರೀಯ ಸಂಗೀತ: ಜಿಲ್ಲಾ ಮಟ್ಟಕ್ಕೆ ವಾಣಿಶ್ರೀ
ಹಾವೇರಿ: ಬ್ಯಾಡಗಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾಗಿನೆಲೆ ಕನಕದಾಸ ಪ್ರೌಢಶಾಲೆ ವಿದ್ಯಾರ್ಥಿನಿ ವಾಣಿಶ್ರೀ ಸವಣೂರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಬ್ಯಾಡಗಿಯ ಎಸ್ಎಸ್ಪಿಎನ್ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಾಣಿಶ್ರೀ ಸಾಧನೆಯನ್ನು ಕನಕದಾಸ ಪ್ರೌಢಶಾಲೆಯ ಪ್ರಧಾನ ಗುರು ಎಂ. ಬಸವರಾಜಪ್ಪ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿಗ್ಗಾಂವಿ: ಅಲ್ ಮೇರಾಜ್ ಉರ್ದು ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪತ್ರಿಭಾ ಕಾರಂಜಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗದಿಂದ ಮಹ್ಮದ ಸಮಿ ನದಾಫ್ (ಉರ್ದು ಕಂಠಪಾಠ), ಹಿರಿಯ ಪ್ರಾಥಮಿಕ ವಿಭಾಗದಿಂದ ಗುಲಾಮಹ್ಮದ್ ಖಲೀಫನವರ (ಧಾರ್ಮಿಕ ಪಠಣ), ಮಿನಾಜಭಾನು ಸವಣೂರ (ಉರ್ದು ಕಂಠಪಾಠ), ಬೀಬಿ ಆಯಿಶಾ ಶಿವಳ್ಳಿ (ಇಂಗ್ಲಿಷ್ ಕಂಠಪಾಠ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆ ಅಧ್ಯಕ್ಷ ಸೈಯದ್ ಇರ್ಫಾನ್ ಇನಾಮದಾರ, ಮುಖ್ಯಶಿಕ್ಷಕ ಮಹ್ಮದ್ ಸಾದಿಕ್ ಮಿಯ್ಯಾಬೇಗ್, ಮಾರ್ಗದರ್ಶಕ ಮುಸ್ತಾಕ ನದಾಫ್ ಮಕ್ಕಳನ್ನು ಅಭಿನಂದಿಸಿದ್ದಾರೆ.
ಪ್ರತಿಭಾ ಕಾರಂಜಿ: ಸಾಧನೆ
ಹಿರೇಕೆರೂರು: ಪಟ್ಟಣದ ಡಿ.ಆರ್. ತಂಬಾಕದ ಪ್ರೌಢಶಾಲೆ ವಿದ್ಯಾರ್ಥಿಗಳು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಅರಮ ಮೇದಾ (ಪ್ರಬಂಧ), ಶಶಿಧರ ಮಾಯಾಚಾರಿ (ಕ್ಲೇ ಮಾಡೆಲಿಂಗ್), ನಿಶಾಕ ಬೇವಿನಹಳ್ಳಿ (ಘಜಲ್), ಶಬೀನಾ ಹಿರೇಮಠ (ಧಾರ್ಮಿಕ ಪಠಣ), ಸಾಧಿಕ್ ಬಾಳಂಬೀಡ (ಉರ್ದು ಭಾಷಣ) ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರನ್ನು ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಕಾರ್ಯದರ್ಶಿ ಎಸ್.ಎಸ್. ಪಾಟೀಲ್, ಮುಖ್ಯ ಶಿಕ್ಷಕ ಸಿ.ಆರ್. ಹುಲ್ಲತ್ತಿ, ಸಿಬ್ಬಂದಿ ಅಭಿನಂದಿಸಿದ್ದಾರೆ.
ಹ್ಯಾಂಡ್ ಬಾಲ್: ರಾಜ್ಯ ತಂಡಕ್ಕೆ ಆಯ್ಕೆ
ಹಾವೇರಿ: ಸಬ್ ಜ್ಯೂನಿಯರ್ ಹ್ಯಾಂಡ್ಬಾಲ್ ಬಾಲಕರ, ಬಾಲಕಿಯರ ತಂಡಕ್ಕೆ ಹಾವೇರಿ ಜಿಲ್ಲಾ ಹ್ಯಾಂಡ್ಬಾಲ್ ಸಂಸ್ಥೆ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬಾಲಕರ ತಂಡಕ್ಕೆ ವಿನಯಕುಮಾರ ತಹಶೀಲ್ದಾರ್, ಶರಣು ರೋನಿಮಠ ಹಾಗೂ ಮನಿ ಬಾಲಕಿಯರ ತಂಡಕ್ಕೆ ಮನೀಷಾ ತಳವಾರ ಆಯ್ಕೆಯಾಗಿದ್ದಾರೆ. ಡಿ. 17ರಂದು ಲಕ್ನೋದಲ್ಲಿ ನಡೆಯುವ 30ನೇ ಸಬ್ ಜ್ಯೂನಿಯರ್ ಹಾಗೂ 15ನೇ ಮಿನಿ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಹ್ಯಾಂಡ್ ಬಾಲ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ಪ್ರಧಾನ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ, ಕೆಂಚಪ್ಪ ಲಿಂಗದಹಳ್ಳಿ, ಸಿದ್ದಪ್ಪ ನವಲೆ, ಬಸವರಾಜ ತಂಡೂರ, ಹರೀಶ ಕರ್ಜಗಿ, ಶಂಭು ಕಲ್ಯಾಣಿ, ಪ್ರವೀಣ ತುಪ್ಪದ ಅಭಿನಂದಿಸಿದ್ದಾರೆ.