ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಿರೇಕೆರೂರು ಬಳಿ 3 ಚಿರತೆ ಮರಿಗಳು ಪತ್ತೆ

Vishwanath S
Updated On : 16 Dec 2013, 1:22 am

ಹಿರೇಕೆರೂರು: ತಾಲೂಕಿನ ಕಡೂರ ಗ್ರಾಮದ ಸಮೀಪ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಚಿರತೆಯನ್ನು ಹಿಡಿಯಲು ರಾತ್ರಿಯೆಲ್ಲ ಗಸ್ತು ಕಾಯುತ್ತಿದ್ದಾರೆ.
ಕುಡುಪಲಿ-ಕಡೂರ ರಸ್ತೆ ಪಕ್ಕದ ಜಮೀನಿನಲ್ಲಿ ಚಿರತೆ ಮರಿಗಳು ಕಾಣಸಿಕ್ಕಿವೆ. ಜನರನ್ನು ಕಂಡ ಮರಿಗಳು ಕಾಲುವೆ ನೀರು ಹರಿದು ಹೋಗುವ 30 ಅಡಿ ಸಿಮೆಂಟ್ ಪೈಪ್‌ನಲ್ಲಿ ಅವಿತುಕೊಂಡಿವೆ. ರೈತರು ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಉಪ ಅರಣ್ಯಾಧಿಕಾರಿ ಆನಂದ ಮದನೆ,  ಸಿಬ್ಬಂದಿ ಎಂ.ಎಂ. ಪೂಜಾರ ಸೇರಿ ಎಂಟು ಸಿಬ್ಬಂದಿ ತಂಡ ಭಾನುವಾರ ಮಧ್ಯಾಹ್ನದಿಂದಲೇ ತಾಯಿ ಚಿರತೆಯ ಶೋಧ ಆರಂಭಿಸಿದೆ. ಸುಳಿವು ಸಿಗದೆ, ರಾತ್ರಿಯೂ ಕಾವಲು ಕಾಯುವಂತಾಗಿದೆ. ಚಿರತೆ ಮರಿಗಳನ್ನು ನೋಡಲು ಕಡೂರ ಗ್ರಾಮಸ್ಥರು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement