ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಲೈಂಗಿಕ ದೌರ್ಜನ್ಯ ತಲೆ ತಗ್ಗಿಸುವ ಸಂಗತಿ: ಶೋಭಾ ಹುಲ್ಮನಿ

Lingaraj Badiger
Updated On : 17 Dec 2013, 12:13 pm

ಬ್ಯಾಡಗಿ: ಮಹಿಳೆ ಭಾರತೀಯ ಸಂಸ್ಕೃತಿಯ ಪ್ರತೀಕ. ಆದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು, ಸಮಾಜ ತಪ್ಪು ದಾರಿ ಹಿಡಿಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೋಭಾ ಹುಲ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಸ್‌ಎಸ್‌ಪಿ.ಎನ್ ಪ್ರೌಢಶಾಲೆಯಲ್ಲಿ ಮಹಿಳಾ ಸಬಲತೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಜಾರಿಯಲ್ಲಿದ್ದರೂ ಮಹಿಳೆಯರನ್ನು ಈ ದೇಶದಲ್ಲಿ ಗೌರವದಿಂದ ಕಾಣಲಾಗುತ್ತಿದೆ. ನದಿಗಳಿಗೂ ಸ್ತ್ರೀಯರ ಹೆಸರುಗಳಿಂದ ಗುರುತಿಸುವುದೇ ಇದಕ್ಕೆ ಸಾಕ್ಷಿ. ಈಚೆಗೆ ಅತ್ಯಾಚಾರ, ಮಹಿಳೆಯರ ಕಳ್ಳ ಸಾಗಾಟ, ವೇಶ್ಯಾವಾಟಿಕೆ, ಹೆಣ್ಣು ಭ್ರೂಣ ಹತ್ಯೆ ಮುಂತಾದವು ಹೆಚ್ಚುತ್ತಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ವಿಷಾದಿಸಿದರು. ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಅನಕ್ಷರತೆ, ಬಡತನ ಕಾರಣ. ಸಮಾಜದ ಪ್ರತಿಯೊಬ್ಬ ಮಹಿಳೆ ವಿದ್ಯಾವಂತಳಾಗಬೇಕು. ಸಾಕ್ಷರತಾ ಪ್ರಮಾಣದಲ್ಲಿ ಏರಿಕೆಯಾಗಿ, ಜನತೆಯಲ್ಲಿ ಜಾಗೃತಿ ಮೂಡಬೇಕು. ಸಂಘಟಿತರಾಗಿ ಮಹಿಳೆಯರು ದೌರ್ಜನ್ಯ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು ಎಂದರು. ಉಪ ಪ್ರಾಚಾರ್ಯ ಎಂ.ಕೆ. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಷ್ಮಾ ಓವಿಕೊಪ್ಪ, ಅಕ್ಷತಾ ಕೊಪ್ಪದ, ಸೌಭಾಗ್ಯಾ ಹೊಸಳ್ಳಿ ದುಡಿಯುವ ಸ್ತ್ರೀ ಹಾಗೂ ಸಾಮಾಜಿಕ ಪ್ರಗತಿಯಲ್ಲಿ ಮಹಿಳೆ ಪಾತ್ರ ಕುರಿತು ಮಾತನಾಡಿದರು. ಅನ್ನಪೂರ್ಣಾ ಕರ್ಜಗಿ, ರೇಣುಕಾ ಮರದ ಉಪಸ್ಥಿತರಿದ್ದರು. ಶೋಭಾ ಬಿಲ್ಲಣ್ಣನವರ ಪ್ರಾರ್ಥಿಸಿದರು. ಪಿ.ಎಫ್. ಕರಿಯಣ್ಣನವರ ಸ್ವಾಗತಿಸಿದರು. ಎಚ್.ಜಿ. ಸುಮಂಗಲಾ ನಿರೂಪಿಸಿದರು. ಡಿ.ಎನ್. ಸವಿತಾ ವಂದಿಸಿದರು.
ಹಸು-ಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement