ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಜಾನಪದ ಕಲಾಮೇಳ, ಗುರುವಂದನೆ

Lingaraj Badiger
Updated On : 18 Dec 2013, 11:43 am

ಹಾನಗಲ್ಲ: ತಾಲೂಕಿನ ಅರಳೇಶ್ವರದ ಕಲಾಭವನದಲ್ಲಿ ಜನಪದ ಕಲಾಮೇಳ ಹಾಗೂ ಗುರುವಂದನ ಸಮಾರಂಭ ಡಿ. 18ರಂದು ಬೆಳಗ್ಗೆ 10 ನಡೆಯಲಿದ್ದು, ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ಶ್ರೀ ಸಿದ್ದೇಶ್ವರ ಪುರವಂತರ ಸೇವಾ ಸಂಘ ಹಾವಣಗಿ-ಅರಳೇಶ್ವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಾಂದ ಸ್ವಾಮೀಜಿ ಸಮ್ಮುಖ, ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆ ವಹಿಸುವರು. ಸಿದ್ದೇಶ್ವರ ಪುರವಂತರ ಸೇವಾ ಸಂಘದ ಅಧ್ಯಕ್ಷ, ಜಾನಪದ ಲೋಕ, ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಗಂಗಾಧರಪ್ಪ ಜವಳಿ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು.
ಸಂಸದ ಶಿವಕುಮಾರ ಉದಾಸಿ, ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಜಿಪಂ ಸದಸ್ಯೆ ಗೀತಾ ಅಂಕಸಖಾನಿ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಗ್ರಾಪಂ ಅಧ್ಯಕ್ಷೆ ಮಮತಾ ಮಡಿವಾಳರ, ಉಪಾಧ್ಯಕ್ಷ ಪುಟ್ಟಪ್ಪ ಬಂಕೊಳ್ಳಿ, ಮುರಿಗೆಪ್ಪ ಡಂಬಳಪ್ಪನವರ, ಶೇಕಪ್ಪ ಶೆಟ್ಟರ, ಮುರಿಗೆಪ್ಪ ಶೆಟ್ಟರ, ದಯಪ್ಪ ನಾಗನೂರ, ಬಸವರಾಜ ಜವಳಿ ಪಾಲ್ಗೊಳ್ಳುವರು.
ಕಲಾ ಮೇಳದಲ್ಲಿ ಕುಮಾರೇಶ್ವರ ಪುರವಂತರ ಸೇವಾ ಸಂಘ, ಗುರುಸಿದ್ಧ ರಾಜಯೋಗೀಂದ್ರ ಪುರವಂತರ ಸೇವಾ ಸಂಘ, ವಾಲ್ಮೀಕಿ ಡೊಳ್ಳಿನ ಸಂಘ, ಮಾಲತೇಶ ಡೊಳ್ಳಿನ ಸಂಘ, ಮಾರುತಿ ಭಜನಾ ಸಂಘ. ಕಲ್ಮೇಶ್ವರ ಭಜನಾ ಸಂಘ, ವಾಲ್ಮೀಕಿ ಭಜನಾ ಸಂಘ, ಹನುಮಂತಪ್ಪ ಭಜಂತ್ರಿ, ದುರ್ಗಾದೇವಿ ಝಾಂಜ್ ಮೇಳದ ಕಲಾವಿದರು ಪ್ರದರ್ಶನ ನೀಡುವರು ಎಂದು ಸಂಘದ ಉಪಾಧ್ಯಕ್ಷ ಶಿವಪುತ್ರಪ್ಪ ಶೆಟ್ಟರ ಹಾಗೂ ಕಾರ್ಯದರ್ಶಿ ವೀರಭದ್ರಪ್ಪ ಶೆಟ್ಟರ ತಿಳಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಹಾವೇರಿ: ಬೆಂಗಳೂರಿನ ಎಚ್‌ಎಎಲ್ ಸಂಸ್ಥೆ ಐಟಿಐ ಅಭ್ಯರ್ಥಿಗಳಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಐಟಿಐ (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ (ಮೋಟರ್ ವೆಹಿಕಲ್), ಶೀಟ್ ಮೆಟಲ್ ವರ್ಕರ್ ಮತ್ತು ಕಾರ್ಪೆಂಟರ್)  ಉತ್ತೀರ್ಣರಾದ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಿನಾಂಕದೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಎ ಬ್ಲಾಕ್, ಜಿಲ್ಲಾಡಳಿತ ಭವನ, ದೇವಗಿರಿ, ಹಾವೇರಿ- ಇಲ್ಲಿಗೆ ಡಿ. 24ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದೂ. 08375-249291) ಸಂಪರ್ಕಿಸಬೇಕೆಂದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement