ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕ್ರೀಡಾ ಸಂಸ್ಥೆಗಳಲ್ಲಿ ರಾಜಕೀಯ ಬೇಡ

Lingaraj Badiger
Updated On : 18 Dec 2013, 11:47 am

ಬ್ಯಾಡಗಿ: ಉತ್ತಮ ಸಾಧನೆ ತೋರಿದರೂ ಅವಕಾಶಕ್ಕಾಗಿ ಕ್ರೀಡಾಪಟುಗಳು ಮಂತ್ರಿಗಳ ಮನೆ ಬಾಗಿಲು ಕಾಯುವುದು ನಾಚಿಕೆಗೇಡಿನ ಸಂಗತಿ. ಕ್ರೀಡಾ ಸಂಸ್ಥೆಗಳಲ್ಲಿ ರಾಜಕೀಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಮಾಜಿ ಶಾಸಕ ಸುರೇಶಗೌಡ ಸಲಹೆ ನೀಡಿದರು.
ಸ್ಥಳೀಯ ಎಸ್‌ಜೆಜೆಎಂ ಕಾಲೇಜು ಮೈದಾನದಲ್ಲಿ ಶಾಂತಿಶಿವ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಾವೇರಿ ಜಿಲ್ಲಾ ಅಮೆಚೂರ್ ಸಂಸ್ಥೆ ಹಾಗೂ ತೀರ್ಪುಗಾರರ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಈವರೆಗಿನ ಎಲ್ಲ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಕಬಡ್ಡಿ ಪಟುಗಳು ಬಂಗಾರದ ಪಡದ ಗೆದ್ದಿದ್ದಾರೆ. ಆದರೂ ಸರ್ಕಾರ ಕ್ರೀಡಾಪಟುಗಳ ಮಧ್ಯೆಯೇ ತಾರತಮ್ಯ ಮಾಡುತ್ತಿದೆ. ದೇಸೀ ಕ್ರೀಡೆ ಉಳಿಸಲು ಸರ್ಕಾರ ಸಹಕರಿಸಬೇಕು. ದೇಶದಲ್ಲಿ ಏಕರೂಪದ ಕ್ರೀಡಾನೀತಿ ತಂದು, ಎಲ್ಲ ಕ್ರೀಡಾಪಟುಗಳಿಗೂ ಒಂದೇ ತೆರನಾದ ಸೌಲಭ್ಯ, ಉದ್ಯೋಗಾವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕ್ರೀಡೆಗಳು ವ್ಯಕ್ತಿಯ ಬದುಕನ್ನು ರೂಪಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಮತ್ತು ಪ್ರೋತ್ಸಾಹದ ಕೊರತೆಯಿಂದ ಕಬಡ್ಡಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ವಿಷಾದಿಸಿದರು.
ಅಮೆಚೂರ್ ಸಂಸ್ಥೆ ಖಜಾಂಚಿ ಗಂಗಣ್ಣ ಎಲಿ ಮಾತನಾಡಿದರು. ರೈತ ಸಂಘ ಮೋಟೆಬೆನ್ನೂರ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ನಾರಾಯಣಪ್ಪ ಕರ್ನೂಲ, ಮಾಜಿ ಸದಸ್ಯ ಬಾಬುಸಾಬ್ ಬಡಿಗೇರ, ಶಾಂತಿ ಶಿವ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಿವಣ್ಣ ಬೂದಿಹಾಳ, ಬಾಬಣ್ಣ ಹೊಸೂರ, ರವಿ ಬಿಲ್ಲಳ್ಳಿ, ಸುಭಾಷ ಬಿಜ್ಜೂರ ಇದ್ದರು. ಫಕ್ಕೀರಪ್ಪ ಬೈರಾಪುರ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement