ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಬೆಂಬಲಿಸಲು ತುದಿಗಾಲಲ್ಲಿ ನಿಂತಿರುವ ಜನತೆ: ಮಲ್ಲಣ್ಣ ಅಂಗಡಿ

Mainashree
Updated On : 19 Dec 2013, 10:59 am

ರಾಣಿಬೆನ್ನೂರು: ಗುಜರಾತ್ ಅಭಿವೃದ್ಧಿಯನ್ನು ನೋಡಿ ಪ್ರಪಂಚವೇ ಬೆರಗಾಗುವಂತಾಗಿದೆ. ಆದ್ದರಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಲು ದೇಶದ ಯುವ ಜನತೆ ಸೇರಿದಂತೆ ಪ್ರಜ್ಞಾವಂತ ನಾಗರಿಕರು ಪಕ್ಷಬೇಧ ಮರೆತು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ನಮೋ ಬ್ರಿಗೇಡ್ ತಾಲೂಕಾಧ್ಯಕ್ಷ ಮಲ್ಲಣ್ಣ ಅಂಗಡಿ ಹೇಳಿದರು.
ತಾಲೂಕಾ ನಮೋ ಬ್ರಿಗೇಡ್ ಯುವ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಉದ್ಘಾಟಿಸಿ ಮಾತನಾಡಿದರು.
ಭಾರತವನ್ನು ಇಲ್ಲಿ ವರೆಗೂ ಆಳಿದ ಯುಪಿಎ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಸಿ ಸಾಕ್ಷಾಧಾರಗಳ ಸಮೇತ ಸಿಕ್ಕಿಬಿದ್ದರುವುದೆ ಸಾಧನೆಯಾಗಿದೆ. ಇದನ್ನು ಮನಗಂಡಿರುವ ದೇಶದ ಯುವ ಜನತೆ ಹಾಗೂ ಸಮಸ್ತ ಭಾರತೀಯರು ಪಕ್ಷ ಭೇದ ಮರೆತು ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯನ್ನಾಗಿಸಲು ಕಾತರರಾಗಿದ್ದಾರೆ ಎಂದರು.
ನಮೋ ಬ್ರಿಗೇಡ್ ಉಪಾಧ್ಯಕ್ಷ ವೀರೇಶ ಕರ್ಜಗಿ, ನಗರ ಘಟಕದ ಅಧ್ಯಕ್ಷ ಭೂಜರಾಜ ದಲಭಂಜನ್, ಕಾರ್ಯದರ್ಶಿ ಶಿವಶಂಕರ ಕೆಂಡದಮಠ, ಸುಮಿತಾ ಕಾಕೂಳ, ನಾಗರಾಜ ಮೈತ್ರಾಣಿ, ರಘು ಅತಡಕರ ಮಾತನಾಡಿದರು.
ಮುಖಂಡರಾದ ರಾಜೇಂದ್ರ ಬಾಕಳೆ, ಪಿ.ಬಿ. ಕುಲ್ಕರ್ಣಿ,ವಿಜಯ ಹಲಗೇರಿ, ಮಲ್ಲಪ್ಪ ಕಂಬಳಿ, ಕೆ.ಎನ್. ಕೋರಧಾನ್ಯಮಠ, ಪ್ರವೀಣ ನಾಯ್ಕ, ರಮೇಶ ಮಾಕನೂರು, ಸುಧೀರ ನಾಯ್ಕ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಸಿದ್ದೇಶ್ವರ ನಗರದ ದೇವಸ್ಧಾನದಿಂದ ಹೋರಟ ರ್ಯಾಲಿಯು ನಗರದ ಕುರುಬಗೇರಿ, ಹಲಗೇರಿ ರಸ್ತೆ, ಮ್ಯಾದಾರ ಓಣಿ, ಟಾಂಗಾಕೋಟ, ಎಂಜಿ ರಸ್ತೆ, ಮೇಡ್ಲೆರಿ ಸರ್ಕಲ್, ಬಸ್ ನಿಲ್ದಾಣದ ಸರ್ಕಲ್, ಅಶೋಕ ನಗರ, ಮೇಡ್ಲೆರಿ ರಸ್ತೆ, ವಾಗೀಶ ನಗರ ಹಾಗೂ ಪೋಸ್ಟ್ ಸರ್ಕಲ್ ಮುಖಾಂತರ ಸಂಗಮ ಸರ್ಕಲ್ ಸೇರುವುದರೊಂದಿಗೆ ಮುಕ್ತಾಯಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement